ಪಾಂಗೋಡು ನವರಾತ್ರಿ ಮಹೋತ್ಸವ ಆಮಂತ್ರಣ ಪತ್ರಿಕೆ, ಎಡನೀರು ಶ್ರೀಗಳು ಬಿಡುಗಡೆ

0
6

ಕಾಸರಗೋಡು : ಕಾಸರಗೋಡು, ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನ, ನವರಾತ್ರಿ ಮಹೋತ್ಸವ 11.10.2026 ರಿಂದ 20.10.2026 ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನ ಗೊಳ್ಳಲಿರುವುದು. 11.10.2026 ರಂದು ನವರಾತ್ರಿ ಮಹೋತ್ಸವ ಬೆಳಿಗ್ಗೆ 8ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಗಣಪತಿ ಯಾಗ, ಎರಡು ಚಂಡಿಕಾ ಹೋಮದೊಂದಿಗೆ ಅಪರಾಹ್ನ 1ಗಂಟೆಗೆ ದರ್ಶನ ಸೇವೆಯೊಂದಿಗೆ ಮಹಾ ಅಲಂಕಾರ ಪೂಜೆ ನಡೆಯುವ ಹಾಗೂ 10 ದಿನಗಳ ಸಂಪೂರ್ಣ ಮಹೋತ್ಸವದ ವೈಧಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀ ಎಡನೀರು ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟಿಸಲಿರುವರು. ನವರಾತ್ರಿ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿ ಶ್ರೀಗಳು ಅನುಗ್ರಹಿಸಿದರು. ಕ್ಷೇತ್ರ ಸಮಿತಿ ಗೌರವ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಸಂದ್ಯಾ ರಾಣಿ ಟೀಚರ್ ನೇತೃತ್ವ ವಹಿಸಿದರು.