ವಿಶಿಷ್ಟ ವಿನೂತನ ಕಂಬಳ ತರಬೇತಿ, ಪ್ರಶಸ್ತಿ ಪ್ರದಾನ ಸಮಾರಂಭ

0
7

ಪ್ರಾಚೀನ ದಕ್ಷಿಣ ಕನ್ನಡ ಜಿಲ್ಲೆಯನ್ನು ಆವರಿಸಿಕೊಂಡಿರುವ ಕಂಬಳದ ಸಂರಕ್ಷಣೆ ನಿರ್ವಹಣೆ ಮತ್ತು ತರಬೇತಿ ಅಕಾಡೆಮಿಯನ್ನು ರಚಿಸಿಕೊಂಡಿರುವ ಮೂಡುಬಿದಿರೆ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮವನ್ನು ಕೇಂದ್ರವಾಗಿ ಹೊಂದಿರುವ ಕೋಟಿ ಚೆನ್ನಯ ಕಂಬಳ ಕ್ರೀಡಾಂಗಣದಲ್ಲಿ 7ನೇ ವರ್ಷದ ಶಿಬಿರಾರ್ಥಿಗಳಿಗಾಗಿ ಪ್ರಾಯೋಗಿಕ ಕಂಬಳ ಮತ್ತು ಕಂಬಳ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಅಕ್ಟೋಬರ್ 8ರಂದು ನಡೆಯಿತು.

ಹಿರಿಯಡ್ಕ ಬೊಮ್ಮರಬೆಟ್ಟು ಯುವ ಬಾಂಧವರುಗಳನ್ನು, ಮೀನಾಕ್ಷಿ ಕರ್ಕೇರ ಹಾಗೂ ಹ್ಯಾಟ್ರಿಕ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಪ್ರಥಮ ಹಿರಿಯ ಓಟಗಾರ ಈದು ಪಡ್ಯಾರ ಮನೆ ಅಶೋಕ್ ಕುಮಾರ್ ಜೈನ್ ಅವರನ್ನು ಪುರಸ್ಕರಿಸಲಾಯಿತು.

ಸುಮಾರು 12 ದಿನಗಳ ಪರ್ಯಂತ 42 ಮಂದಿ ನೂತನ ತರಬೇತಿ ಹೊಂದಿದ ಕಂಬಳ ಓಟಗಾರರಿಗೆ ನಡೆಸಿದ ಪ್ರಾಯೋಗಿಕ ತರಬೇತಿಯನ್ನು ನಡೆಸಿಕೊಟ್ಟವರು ಶಾಂತರಾಮ ರೈ, ಸಿದ್ದಕಟ್ಟೆಯ ಯಶವಂತ, ಮತ್ತು ಅವೀನ್ ಅವರನ್ನು ಗೌರವಿಸಲಾಯಿತು.

ಕಂಬಳ ಶಿಸ್ತು ಸಮಿತಿಯ ಅಧ್ಯಕ್ಷ ಕೊಡಕ್ಕೆ ಇರ್ವತ್ತೂರು ಭಾಸ್ಕರ್ ಕೋಟ್ಯಾನ್, ಪಂಚಶಕ್ತಿಯ ರಂಜಿತ್ ಪೂಜಾರಿ ತೋಡಾರು, ಕಂಬಳ ಸಮಿತಿಯ ವಿವಿಧ ನೇತಾರರ ಸಮಕ್ಷಮ ಕಾರ್ಯಕ್ರಮ ನಡೆಯಿತು. ಕಂಬಳ ಅಕಾಡೆಮಿಯ ಸಂಚಾಲಕ ಗುಣಪಾಲ ಕಡಂಬ, ನವೀನ್ ಅಂಬೂರಿ ಕಾರ್ಯಕ್ರಮ ನಿರ್ವಹಿಸಿದರು.

ವರದಿ ರಾಯಿ ರಾಜ ಕುಮಾರ್