ಅರಸಮ್ಮಕಾನು ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅ.11ರಿಂದ ಶರನ್ನವರಾತ್ರಿ ಮಹೋತ್ಸವ

0
7

ಶೇಡಿಮನೆ : ಅರಸಮ್ಮಕಾನು ಶೇಡಿಮನೆಯ ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವವು ಅಕ್ಟೋಬರ್ 11ರಿಂದ 21ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಮಹೋತ್ಸವದ ಅಂಗವಾಗಿ ಪ್ರತಿದಿನ ಬೆಳಗ್ಗೆ 9ರಿಂದ 10 ಗಂಟೆಯವರೆಗೆ ಶ್ರೀ ದೇವಿಯ ಸನ್ನಿಧಿಯಲ್ಲಿ ಸಪ್ತಶತೀ ಪಾರಾಯಣ ಹಾಗೂ ಕಲ್ಪೋಕ್ತ ಪೂಜೆ ನಡೆಯಲಿದೆ. ಪ್ರತಿದಿನ ಸಂಜೆ 6.30ರಿಂದ ರಾತ್ರಿ 8.30ರವರೆಗೆ ದೀಪಾರಾಧನೆ ಸಹಿತ ರಂಗಪೂಜೆ ಸೇವೆ ಜರುಗಲಿದೆ.

ಅಕ್ಟೋಬರ್ 15ರಂದು ಚಂಡಿಕಾಹೋಮ ನಡೆಯಲಿದ್ದು, ಐದನೇ ನವರಾತ್ರಿಯ ಸೇವೆಯನ್ನು ಕುದ್ರುಬೀಡು ಮನೆಯವರು ನೆರವೇರಿಸಲಿದ್ದಾರೆ. ಅಕ್ಟೋಬರ್ 16ರಂದು ಶ್ರೀ ರಾಘವೇಂದ್ರ ಶೆಟ್ಟಿ ಮತ್ತು ಮನೆಯವರಿಂದ ಸೇವೆ ನಡೆಯಲಿದೆ. ಅಕ್ಟೋಬರ್ 21ರಂದು ವಿಜಯದಶಮಿ ಆಚರಣೆ ನಡೆಯಲಿದ್ದು, ಅಂದು ಅನ್ನಪ್ರಸಾದ ಸೇವೆಯನ್ನು ಶ್ರೀ ಚಂದ್ರ ಶೆಟ್ಟಿ ಬಾಗಳಮಕ್ಕಿ, ಶ್ರೀಮತಿ ರೇವತಿ ಮತ್ತು ಶ್ರೀ ರಘುರಾಮ ಶೆಟ್ಟಿ ಬಾಗಳಮಕ್ಕಿ ಹಾಗೂ ಶ್ರೀಮತಿ ಸವಿತಾ ಮತ್ತು ಶ್ರೀ ಸುರೇಶ ಶೆಟ್ಟಿ ಬಾಗಳಮಕ್ಕಿ ಅವರು ನೆರವೇರಿಸಲಿದ್ದಾರೆ.

ನವರಾತ್ರಿ ಉತ್ಸವದ ವಿವಿಧ ದಿನಗಳಲ್ಲಿ ಭಕ್ತಾದಿಗಳು ಸೇವಾಕರ್ತರಾಗಿ ಭಾಗವಹಿಸಲಿದ್ದಾರೆ. ಸಪ್ತಶತೀ ಪಾರಾಯಣ ಹಾಗೂ ಕಲ್ಪೋಕ್ತ ಪೂಜೆ ಸೇವೆ ಸಲ್ಲಿಸಲು ಇಚ್ಛಿಸುವ ಭಕ್ತರು ದೇವಸ್ಥಾನದ ಅಧ್ಯಕ್ಷರು ಅಥವಾ ಅರ್ಚಕರನ್ನು ಮುಂಚಿತವಾಗಿ ಸಂಪರ್ಕಿಸುವಂತೆ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9972987708, 9535245668.

ಶ್ರೀ ದೇವಿಯ ದರ್ಶನ ಪಡೆದು ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಅಧ್ಯಕ್ಷರು, ಕಾರ್ಯದರ್ಶಿ, ಅರ್ಚಕರು ಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಭಕ್ತಾದಿಗಳಲ್ಲಿ ವಿನಂತಿಸಿದ್ದಾರೆ.