ಉಪ್ಪಿನಂಗಡಿಯಲ್ಲಿ ಅ.12ರಿಂದ ‘ಮಣ್ಣಿನ ಪಿಲಿಮಂಡೆ’ ತಯಾರಿಕಾ ಕಾರ್ಯಾಗಾರ

0
6

ಉಪ್ಪಿನಂಗಡಿ : ತುಳುನಾಡಿನ ಜನಪ್ರಿಯ ಹುಲಿವೇಷದ ಕಲೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ದೃಷ್ಟಿ ಸ್ಕೂಲ್ ಆಫ್ ಆರ್ಟ್ ತಂಡದ ವತಿಯಿಂದ ಉಪ್ಪಿನಂಗಡಿಯಲ್ಲಿ ಪ್ರಪ್ರಥಮ ಬಾರಿಗೆ ‘ಮಣ್ಣಿನ ಪಿಲಿಮಂಡೆ’ ತಯಾರಿಕಾ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ಅಕ್ಟೋಬರ್ 12ರ ಸೋಮವಾರ ಹಾಗೂ 13ರ ಮಂಗಳವಾರದಂದು ಉಪ್ಪಿನಂಗಡಿಯ ಸಹಸ್ರ ಕೋಚಿಂಗ್ ಸೆಂಟರ್‌ನಲ್ಲಿ ಈ ಕಾರ್ಯಾಗಾರ ನಡೆಯಲಿದೆ. ಪ್ರತಿದಿನ ಬೆಳಗ್ಗೆ 9.30ರಿಂದ ಸಂಜೆ 4 ಗಂಟೆಯವರೆಗೆ ತರಬೇತಿ ನೀಡಲಾಗುತ್ತದೆ.

ನೈಸರ್ಗಿಕ ಮಣ್ಣನ್ನು ಬಳಸಿ ಪಿಲಿಮಂಡೆ ತಯಾರಿಸುವ ಕಲೆಯನ್ನು ಕಲಿಯಲು ಆಸಕ್ತರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಕಾರ್ಯಾಗಾರದಲ್ಲಿ ಭಾಗವಹಿಸುವವರು ತಮ್ಮ ಕೈಯಾರೆ ಮಣ್ಣಿನ ಪಿಲಿಮಂಡೆಯನ್ನು ತಯಾರಿಸಿ, ತಾವು ರೂಪಿಸಿದ ಕಲಾಕೃತಿಯನ್ನು ಮನೆಗೆ ಕೊಂಡೊಯ್ಯಬಹುದು.

ತುಳುನಾಡಿನ ಸಾಂಸ್ಕೃತಿಕ ಪರಂಪರೆಯೊಂದಿಗೆ ಬೆಸೆದುಕೊಂಡಿರುವ ಹುಲಿವೇಷದ ಕಲಾತ್ಮಕ ಅಂಶಗಳನ್ನು ಪರಿಚಯಿಸುವ ಈ ಕಾರ್ಯಾಗಾರದಲ್ಲಿ ಆಸಕ್ತರು ಭಾಗವಹಿಸುವಂತೆ ಆಯೋಜಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8310814115, 9448726178, 6361133939.