ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಭಾಷಣ ಸ್ಪರ್ಧೆ

0
16

ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಎಸ್ ಡಿ ಸಾಮ್ರಾಜ್ಯ ಸ್ಮಾರಕ ಅಂತರ್ ಕಾಲೇಜು ಭಾಷಣ ಸ್ಪರ್ಧೆ ಮೂಡುಬಿದಿರೆ ಮಹಾವೀರ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಕ್ಟೋಬರ್ ಒಂಬತ್ತರಂದು ನಡೆಯಿತು. ಗಾಂಧಿ ವಿಚಾರಧಾರೆಯ ಬಗ್ಗೆ ನಡೆದ ಈ ಸ್ಪರ್ಧೆಯನ್ನು ಕಾಲೇಜು ಸಭಾಂಗಣದಲ್ಲಿ ಮಹಾವೀರ ಕಾಲೇಜಿನ ಹಳೆ ವಿದ್ಯಾರ್ಥಿ ನ್ಯಾಯವಾದಿ ವಿಶಾಲ್ ಕುಮಾರ್ ಎಂ ದೀಪ ಬೆಳಗಿ ಉದ್ಘಾಟಿಸಿದರು.

ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಗಾಂಧೀ ವಿಚಾರಧಾರೆ ಸದಾ ಕಾಲಕ್ಕೂ ಪ್ರಸ್ತುತವಾದದ್ದು. ಅಂತಹ ಹಲವಾರು ವಿಚಾರಧಾರೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡ ಎಸ್‌ಡಿ ಸಾಮ್ರಾಜ್ಯ ಅವರು ಬಹಳ ಸರಳ ಜೀವನವನ್ನು ನಡೆಸಿ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಕಾರಣರಾದವರು. ಅಂಥವರ ಬದುಕು ಕೂಡ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕ ಎಂದು ಅಭಿವಂದಿಸಿದರು.

ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ, ಮಾಜಿ ಸಚಿವ ಕೆ ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಚಾರ್ಯ ರಾಧಾಕೃಷ್ಣ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳಲ್ಲಿ ನಿರಂತರವಾಗಿ 20 ವರ್ಷಗಳಿಂದ ಎಸ್ ಡಿ ಸಾಮ್ರಾಜ್ಯ ಸ್ಮಾರಕ ಸ್ಪರ್ಧೆಗಳನ್ನು ಗಾಂಧೀ ವಿಚಾರಧಾರೆಯಲ್ಲಿ ನಡೆಸಿಕೊಂಡು ಬರಲಾಗುತ್ತಿದೆ ಇದಕ್ಕೆ ಮುಖ್ಯ ಪ್ರೇರಕರು ಅವರ ಮಗ ಸಂಪತ್ ಸಾಮ್ರಾಜ್ಯ ಎಂದು ನೆನಪಿಸಿಕೊಂಡರು.

ಇದೇ ಸಂದರ್ಭದಲ್ಲಿ ಇತ್ತೀಚೆಗೆ ಗೌರವ ಡಾಕ್ಟರೇಟ್ ಪಡೆದ ಕಾಲೇಜಿನ ಹಳೆ ವಿದ್ಯಾರ್ಥಿನಿ, ಉತ್ತಮ ಬರಹಗಾರ್ತಿ ಹಾಗೂ ಕಾರ್ಯಕ್ರಮದಲ್ಲಿ ನಿರ್ಣಾಯಕ ರಾಗಿ ಭಾಗವಹಿಸುತ್ತಿರುವ ರಿಷಲ್ಅ ವರನ್ನು ಸನ್ಮಾನಿಸಲಾಯಿತು. ಕಾಲೇಜು ಮಾನವಿಕ ಸಂಘದ ಆಶ್ರಯದಲ್ಲಿ ನಡೆದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಪಿಯು ಪ್ರಾಂಶುಪಾಲೆ ವಿಜಯಲಕ್ಷ್ಮಿ, ವಿ.ಕ್ಷೇ.ಅ. ಪ್ರೊ.ಹರೀಶ್, ಸಂಘದ ಕಾರ್ಯದರ್ಶಿ ಮರಿಯಾ ಹಾಜರಿದ್ದರು. ವಿದ್ಯಾರ್ಥಿಗಳಾದ ವಿಕ್ರೀತಿ ಪರಿಚಯಗೈದರು. ಅಶ್ವಿನಿ ವಂದಿಸಿದರು.