ಜಾಲ್ಸೂರು : ಸುಳ್ಯ ಘಟಕ ಇದರ ಆಶ್ರಯದಲ್ಲಿ, ಮಹಮ್ಮಾಯಿ ಭಜನಾ ಮಂಡಳಿ ಅಡ್ಡೂರು ಹಾಗೂ ಸ್ವರ ಸಂಗಮ ಪಂಜಿಕಲ್ಲು ಇವರ ಸಹಕಾರದೊಂದಿಗೆ, ಆರ್.ಪಿ ಕಲಾ ಸೇವಾ ಟ್ರಸ್ಟ್ (ರಿ.) ಪಂಬಾರು (ಪುತ್ತೂರು ತಾಲೂಕು) ವತಿಯಿಂದ ಆಯೋಜಿಸಲಾಗಿದ್ದ ‘ಕನ್ನಡ ರಾಜ್ಯೋತ್ಸವ ಸಂಭ್ರಮ-2026’ ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದ ಗಣನೀಯ ಸಾಧನೆಗಾಗಿ ಸುರೇಶ್ ಕುಮಾರ್ ಜಿ ಚಾರ್ವಾಕ ಪಾಲ್ತಿಲ ಅವರಿಗೆ ಪ್ರತಿಷ್ಠಿತ ‘ಕನ್ನಡ ಸಿರಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ನವೆಂಬರ್ 22ರ ಭಾನುವಾರದಂದು ಜಾಲ್ಸೂರಿನ ಪಂಚಾಯತ್ ಸಭಾಭವನದಲ್ಲಿ ನಡೆದ ಈ ಸಮಾರಂಭದಲ್ಲಿ, ಸಮಾಜದ ಮುಖ್ಯವಾಹಿನಿಯಲ್ಲಿ ಸಾಹಿತ್ಯದ ಮೂಲಕ ಸಾಂಸ್ಕೃತಿಕ ಪರಂಪರೆಯ ಹಿರಿಮೆ ಗರಿಮೆಯನ್ನು ಹೆಚ್ಚಿಸಿದ ಸುರೇಶ್ ಕುಮಾರ್ ಜಿ ಚಾರ್ವಾಕ ಪಾಲ್ತಿಲ ಅವರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಆರ್.ಪಿ ಕಲಾ ಸೇವಾ ಟ್ರಸ್ಟ್ (ರಿ.) ಪಂಬಾರು ಇದರ ಅಧ್ಯಕ್ಷರಾದ ಶ್ರೀಧರ್ ಎಕ್ಕಡ್ಕ, ಉಪಾಧ್ಯಕ್ಷರಾದ ರೋಹಿತ್ ಕುರಿಕ್ಯಾರ್, ಕಾರ್ಯದರ್ಶಿ ವಿನಯ್ ಕುಮಾರ್ ಅಡ್ಪನಡ್ಕ, ನಿರ್ದೇಶಕರಾದ ಕುಶಾಲಪ್ಪ ಎಣ್ಣೂರು, ಸಂಚಾಲಕರಾದ ರವಿ ಪಂಬಾರ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಸಮಾರಂಭದ ಅಂಗವಾಗಿ ಗೀತಗಾಯನ, ನೃತ್ಯ ರೂಪಕ ಹಾಗೂ ಸಾಹಿತ್ಯ ಕವಿಗೋಷ್ಠಿ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾದವು ಸುರೇಶ್ ಕುಮಾರ್ ಜಿ. ಚಾರ್ವಾಕ ಪಾಲ್ತಿಲ ಕಡಬ ತಾಲೂಕು ಚಾರ್ವಾಕ ಗ್ರಾಮದ ಪಾಲ್ತಿಲ ಕುಮಾರ್ ಮತ್ತು ಸರೋಜಿನಿ ಅವರ ಪುತ್ರ

