ಕೊರಗಪ್ಪ ಪೂಜಾರಿ ನಿಧನ

0
1

ಬಂಟ್ವಾಳ :ಇಲ್ಲಿನ ರಾಯಿ ಸಮೀಪದ ನೀರಲ್ಕೆ ನಿವಾಸಿ, ದೈವಪಾತ್ರಿ ಕೊರಗಪ್ಪ ಪೂಜಾರಿ (80) ಇವರು ಹೃದಯಾಘಾತದಿಂದ ಗುರುವಾರ ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ. ಮೃತರು ಕಳೆದ ಹಲವು ವರ್ಷಗಳಿಂದ ಕೃಷಿಕರಾಗಿ, ದೈವಪಾತ್ರಿಯಾಗಿ ಗುರುತಿಸಿಕೊಂಡಿದ್ದರು. ಮೃತರ ಅಂತ್ಯಕ್ರಿಯೆ ಗುರುವಾರ ಸಂಜೆ ಸ್ವಗೃಹ ಬಳಿ ನೆರವೇರಿತು.