ಬಂಟ್ವಾಳ : ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಗ್ರಾಮ ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನದಲ್ಲಿ ಅ.11ರಿಂದ 20ರತನಕ ವಾರ್ಷಿಕ ನವರಾತ್ರಿ ಉತ್ಸವ ಕಾರ್ಯಕ್ರಮ ನಡೆಯಲಿದೆ.
ಪ್ರತಿದಿನ ಸಂಜೆ ಗಂಟೆ 7ರಿಂದ ಭಜನೆ, ರಾತ್ರಿ 8 ಗಂಟೆಗೆ ದೇವರಿಗೆ ನವರಾತ್ರಿ ಪೂಜೆ ಮತ್ತು ರಂಗಪೂಜೆ ಹಾಗೂ 8.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಅ.17ರಂದು ಸಂಜೆ 4 ಗಂಟೆಗೆ ಇಲ್ಲಿನ ನಾಗ ಸನ್ನಿಧಿಯಲ್ಲಿ ಆಶ್ಲೇಷಾ ಬಲಿ ಪೂಜೆ ಮತ್ತು ವಿಶೇಷ ಭಜನೆ ನೆರವೇರಲಿದೆ ಎಂದು ದೇವಳದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್ ತಿಳಿಸಿದ್ದಾರೆ.
