ಹಿರಿಯ ನಾಗರಿಕರ ಸಂಬಂಧಿಕರ ಪತ್ತೆಗಾಗಿ ಮನವಿ

0
24

ಅಸಹಾಯಕ ಸ್ಥಿತಿಯಲ್ಲಿದ್ದ ಸುಮಾರು 75 ವರ್ಷ ವಯಸ್ಸಿನ ಕೆ. ಸೀನಾ ಎಂಬ ಹಿರಿಯ ನಾಗರಿಕರನ್ನು ನಿತ್ಯಾನಂದ ಒಳಕಾಡು ಅವರು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಆಸ್ಪತ್ರೆ, ಅಜ್ಜರಕಾಡು ಇಲ್ಲಿ ದಾಖಲಿಸಿದ್ದು, ಈ ಕುರಿತು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಕ್ಕೆ ಮಾಹಿತಿ ನೀಡಿರುತ್ತಾರೆ.

ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿಯವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಹಿರಿಯ ನಾಗರಿಕರೊಂದಿಗೆ ವಿಚಾರಿಸಿದಾಗ, ಅವರು ತಮ್ಮ ಹೆಸರು ಕೆ. ಸೀನಾ, ತಂದೆಯ ಹೆಸರು ಕೊರಗ ನಾಯ್ಕ್, ವಯಸ್ಸು ಸುಮಾರು 75 ವರ್ಷ ಎಂದು ತಿಳಿಸಿರುತ್ತಾರೆ. ತಮ್ಮ ವಿಳಾಸವನ್ನು ದೇವಿಪ್ರಸಾದ್, 5ನೇ ನೆಯಂ ಪಳ್ಳಿ, ಸಂತೇಕಟ್ಟೆ, ಉಡುಪಿ ಎಂದು ತಿಳಿಸಿರುತ್ತಾರೆ.

ಅಲ್ಲದೆ, ತಮ್ಮನ್ನು ತಮ್ಮ ಸಹೋದರ ಗೋಪಾಲ್ ನಾಯ್ಕ್ ಅವರು ನೋಡಿಕೊಳ್ಳುತ್ತಿದ್ದರು ಎಂದು ಮಾಹಿತಿ ನೀಡಿರುತ್ತಾರೆ.

ಸದರಿ ಹಿರಿಯ ನಾಗರಿಕರ ಸಂಬಂಧಿಕರು ಅಥವಾ ಪರಿಚಯಸ್ಥರು ಯಾರಿಗಾದರೂ ಇವರ ಬಗ್ಗೆ ಮಾಹಿತಿ ತಿಳಿದಿದ್ದಲ್ಲಿ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಟೋಲ್ ಫ್ರೀ ಸಂಖ್ಯೆ 1090 ಅಥವಾ ದೂರವಾಣಿ ಸಂಖ್ಯೆ 0820-2526394 ಅನ್ನು ಸಂಪರ್ಕಿಸುವಂತೆ ಈ ಮೂಲಕ ಕೋರಲಾಗಿದೆ.