
ಅಸಹಾಯಕ ಸ್ಥಿತಿಯಲ್ಲಿದ್ದ ಸುಮಾರು 70 ವರ್ಷ ವಯಸ್ಸಿನ ಉಪೇಂದ್ರ ನಾಯ್ಕ್ ಎಂಬ ಹಿರಿಯ ನಾಗರಿಕರನ್ನು ನಿತ್ಯಾನಂದ ಒಳಕಾಡು ಅವರು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಈ ಕುರಿತು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಕ್ಕೆ ಮಾಹಿತಿ ನೀಡಿರುತ್ತಾರೆ.
ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿಯವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಹಿರಿಯ ನಾಗರಿಕರೊಂದಿಗೆ ವಿಚಾರಿಸಿದಾಗ, ಅವರು ತಮ್ಮ ಹೆಸರು ಉಪೇಂದ್ರ ನಾಯ್ಕ್, ವಯಸ್ಸು ಸುಮಾರು 70 ವರ್ಷ ಎಂದು ತಿಳಿಸಿರುತ್ತಾರೆ. ತಮ್ಮ ವಿಳಾಸವನ್ನು ಹಾಲಾಡಿ, ಸಿದ್ದಾಪುರ, ಎಸ್‌ಬಿಐ ಬ್ಯಾಂಕ್ ಹತ್ತಿರ ಎಂದು ತಿಳಿಸಿರುತ್ತಾರೆ.
ಅಲ್ಲದೆ, ತಮಗೆ ಪೂಜಾ ಭಟ್ ಎಂಬ ಮಗಳಿದ್ದು, ಅವರ ಪತಿಯ ಹೆಸರು ಗುರುಭಟ್ ಎಂದು ತಿಳಿಸಿರುತ್ತಾರೆ. ಇವರು ಹಾಲಾಡಿ, ಸಿದ್ದಾಪುರ, ಎಸ್‌ಬಿಐ ಬ್ಯಾಂಕ್ ಹತ್ತಿರ ವಾಸವಾಗಿರುವುದಾಗಿ ಮಾಹಿತಿ ನೀಡಿರುತ್ತಾರೆ.
ಸದರಿ ಹಿರಿಯ ನಾಗರಿಕರ ಸಂಬಂಧಿಕರು ಅಥವಾ ಪರಿಚಯಸ್ಥರು ಯಾರಿಗಾದರೂ ಇವರ ಬಗ್ಗೆ ಮಾಹಿತಿ ತಿಳಿದಿದ್ದಲ್ಲಿ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಟೋಲ್ ಫ್ರೀ ಸಂಖ್ಯೆ 1090 ಅಥವಾ ದೂರವಾಣಿ ಸಂಖ್ಯೆ 0820-2526394 ಅನ್ನು ಸಂಪರ್ಕಿಸುವಂತೆ ಈ ಮೂಲಕ ಕೋರಲಾಗಿದೆ.
