ಬಿಜೆಪಿ ಉಡುಪಿ ನಗರ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಯೋಧ ಶ್ರೀಕಾಂತ್ ಭಟ್ ಪೆರಂಪಳ್ಳಿ ಅವರಿಗೆ ಗೌರವಾರ್ಪಣೆ

0
13

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಉಡುಪಿ ನಗರ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬ ಹಾಗೂ ‘ಸೇವಾ ಸಂಕಲ್ಪ ಅಭಿಯಾನ’ದ ಅಂಗವಾಗಿ ದೇಶದ ಗಡಿ ಕಾಯುವ ಯೋಧ ಶ್ರೀಕಾಂತ್ ಭಟ್ ಪೆರಂಪಳ್ಳಿ ಅವರನ್ನು ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಅವರು ಮೂಡು ಪೆರಂಪಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್, ಅಲ್ಪಸಂಖ್ಯಾತ ಮೋರ್ಚಾ ಉಡುಪಿ ನಗರ ಅಧ್ಯಕ್ಷ ಡೆನ್ನಿಸ್ ಮಾಸ್ಕರೇನಸ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಉಮೇಶ್ ನಾಯ್ಕ್, ಜಿಲ್ಲಾ ಮಾಧ್ಯಮ ಸಂಚಾಲಕ ಶಶಾಂಕ್ ಶಿವತ್ತಾಯ, ಉಡುಪಿ ನಗರ ಉಪಾಧ್ಯಕ್ಷ ಕಿಶೋರ್ ಕರಂಬಳ್ಳಿ, ಉಡುಪಿ ನಗರ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶೆರ್ಲಿನ್ ಮಾಸ್ಕರೇನ್ಹಸ್, ಶೇಖ್ ಫಯಾಜ್, ಉಪಾಧ್ಯಕ್ಷರಾದ ಅಬ್ದುಲ್ ಖಾದರ್, ಕಾರ್ಯಕಾರಿಣಿ ಸದಸ್ಯರಾದ ವಿನ್ನಿ ಡಿಸೋಜಾ, ಲಿಡಿಯ, ಸ್ಟೇನಿ ಡಿಸೋಜಾ, ಪ್ರಿಯ ಮಾಸ್ಕರೇನ್ಹಸ್, ರಾಫಯಲ್ ಮಾಸ್ಕರೇನ್ಹಸ್, ವಿಸೆಂಟ್ ಡಿಸೋಜಾ, ಮಾಜಿ ನಗರ ಸಭಾ ಸದಸ್ಯೆ ಅನಿತಾ ಬೆಲಿಂಡಾ ಡಿಸೋಜಾ, ಪ್ರಮುಖರಾದ ಪ್ರಶಾಂತ್ ಭಟ್, ಶಂಕರ್ ಕುಲಾಲ್, ಉಲ್ಲಾಸ್ ದೇವಾಡಿಗ, ಭಾಸ್ಕರ್ ಕೋಟ್ಯಾನ್, ಯಶೋಧರ ಅಮೀನ್, ಸಂತೋಷ್ ಅಮೀನ್, ವಿಶ್ವಾಸ್, ಬೂತ್ ಅಧ್ಯಕ್ಷೆ ಲೀನಾ ಕೆ.ಎಲ್., ಪಕ್ಷದ ಹಿರಿಯರಾದ ಬಾಲಕೃಷ್ಣ ಆಚಾರ್ಯ, ವಸಂತ್ ಕಲ್ಮಾಡಿ, ಕುಟ್ಟಿ ಪಾಲನ್, ಸ್ಥಳೀಯರಾದ ಪ್ರೇಮ, ಶೇಖರ್ ಶೆಟ್ಟಿ, ನಾಗರಾಜ್ ಸರಳಾಯ, ಗುರುಪ್ರಸಾದ್, ಶಾಲಿನಿ, ದೇವು ಮತ್ತಿತರರು ಉಪಸ್ಥಿತರಿದ್ದರು.