​ಕರಾವಳಿ ಕರ್ನಾಟಕದ ಸಾಮಾಜಿಕ ಸೇವೆಗಾಗಿ ಕಟ್ಟಬೇಲ್ತೂರಿನ ಶಿವಶಕ್ತಿ ಭಜನಾ ಮಂದಿರದಲ್ಲಿ ‘ಯೂತ್ ಫಾರ್ ಕೋಸ್ಟ್’ ಚಾಲನೆ

0
22

​ಕರಾವಳಿ ಕರ್ನಾಟಕ ಭಾಗದಲ್ಲಿ ಸಾಮಾಜಿಕ ಸೇವೆ ಮತ್ತು ಸಮುದಾಯದ ಅಭಿವೃದ್ಧಿಯನ್ನು ಉತ್ತೇಜಿಸುವ ಉದ್ಧೇಶದಿಂದ ‘ಯೂತ್ ಫಾರ್ ಕೋಸ್ಟ್’ (Youth for Coast – Waves of Change) ಸಂಸ್ಥೆಗೆ ಕಟ್ಟಬೇಲ್ತೂರು ಶಿವಶಕ್ತಿ ಭಜನಾ ಮಂದಿರದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಯಿತು.

ಈ ಉದ್ಘಾಟನಾ ಸಮಾರಂಭದಲ್ಲಿ ಸ್ಥಳೀಯ ಮುಖಂಡರು, ಯುವಕರು, ಸಮುದಾಯದ ಪ್ರಮುಖರು ಹಾಗೂ ಬೆಂಬಲಿಗರು ಭಾಗವಹಿಸಿ, ಕರಾವಳಿ ಪ್ರದೇಶದ ಸಾಮಾಜಿಕ, ಪರಿಸರ ಮತ್ತು ಅಭಿವೃದ್ಧಿ ಸವಾಲುಗಳನ್ನು ಎದುರಿಸಲು ಯುವಶಕ್ತಿಯನ್ನು ಸಂಘಟಿಸುವ ಸಂಕಲ್ಪ ಮಾಡಿದರು.

​”ವೇವ್ಸ್ ಆಫ್ ಚೇಂಜ್” (ಬದಲಾವಣೆಯ ಅಲೆಗಳು) ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯನಿರ್ವಹಿಸಲಿರುವ ‘ಯೂತ್ ಫಾರ್ ಕೋಸ್ಟ್’ ಸಂಸ್ಥೆಯು, ಕರಾವಳಿ ಭಾಗದಲ್ಲಿ ನಿರಂತರ ಸಾಮಾಜಿಕ ಸೇವೆ, ಪರಿಸರ ಸಂರಕ್ಷಣೆ ಮತ್ತು ಯುವ ನಾಯಕತ್ವವನ್ನು ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ.

​ಕಾರ್ಯಕ್ರಮದ ವೇಳೆ ಸಂಸ್ಥೆಯ ಪೋಸ್ಟರ್ ಹಾಗೂ ಬ್ಯಾನರ್ ಅನಾವರಣಗೊಳಿಸಲಾಯಿತು. ಜೊತೆಗೆ ಕಾರ್ಯಕ್ರಮದಲ್ಲಿ “ಕಾರ್ ಡಸ್ಟ್ ಬಿನ್” ವಿತರಿಸಿ, ಕಾರಿನಲ್ಲಿ ಓಡಾಡುವಾಗ ಉತ್ಪತ್ತಿಯಾಗುವ ಟಿಕೆಟ್, ಚಾಕಲೇಟ್ ಕವರ್, ಐಸ್ ಕ್ರೀಮ್ ಕವರ್, ಇತರ ಸಣ್ಣ ಸಣ್ಣ ಕಸಗಳನ್ನು ಎಲ್ಲೆಂದರಲ್ಲಿ ಎಸೆಯದೆ ಸಂಗ್ರಹಿಸಿ ನಂತರ ಅದನ್ನು ಮನೆಯಲ್ಲಿ ಅಥವಾ ದೊಡ್ಡ ಕಸದ ಬುಟ್ಟಿಯಲ್ಲಿ ಎಸೆಯುವುದರ ಮೂಲಕ ಸ್ವಚ್ಛತೆ ಕಾಪಾಡಿ ಎಂಬ ಮನವಿಯೊಂದಿಗೆ ಕರಾವಳಿ ಭಾಗದ ಸೇವೆ ಹಾಗೂ ಸಂರಕ್ಷಣೆಗಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಸಂದೇಶ ನೀಡಲಾಯಿತು.