ಕಾಸರಗೋಡು ಪಾಂಗೋಡು : ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನ ದಲ್ಲಿ “ನಡೆಯುತ್ತಿರುವ ಕಾಸರಗೋಡು ದಸರಾ ಸಂಕೀರ್ತನ ದಷಾಹ ಕಾರ್ಯಕ್ರಮದಲ್ಲಿ ಭಜನೆ ಸೇವೆ ನೀಡಿದ ತಂಡಕ್ಕೆ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ ಸಮಿತಿ ಭಜನಾ ತಂಡವನ್ನು ಸನ್ಮಾನಿಸಿ ಗೌರವಿಸಿತು.
ಶ್ರೀ ದೂಮಾವತಿ ದೇವಸ್ಥಾನ ನುಳ್ಳಿಪ್ಪಾಡಿಯ ಆಡಳಿತ ಮೊಕ್ತೇಸರರಾದ ಗೋಪಾಲ್ ಶೆಟ್ಟಿ ಪ್ರಮಾಣ ಪತ್ರ, ಕಾಸರಗೋಡು ದಸರಾ ಪ್ರದಾನ ಸಂಚಾಲಕರಾದ ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ಸ್ಮರಣಿಕೆ ನೀಡಿದರು. ಡಾ. ಭುವನೇಶ್ವರಿ ದಾರವಾಡ, ಮಾಧುರಿ ಕಿಶೋರ್ ಬೆಂಗಳೂರು, ಸಂದ್ಯಾ ರಾಣಿ ಟೀಚರ್ ಸಹಕರಿಸಿದರು. ಸನ್ಮಾನ ಸ್ವೀಕರಿಸಿ ಶ್ರೀ ಹರಿ ಮಹಿಳಾ ಭಜನಾ ಸಂಘ ಪ್ರಮುಖೆ ಲಲಿತಾ ಕೇಶವ್ ಅಭಿನಂದನೆ ಸಲ್ಲಿಸಿದರು.

