ಮೂಡುಬಿದಿರೆ : ಮೂಡುಬಿದಿರೆ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುತ್ತು ಬರ್ಕೆ ನೀರಾಮಜಲು ಪಾಲಡ್ಕ ಸಾಲ್ಯಾನ್ ಕುಟುಂಬದ ಮನೆಯಲ್ಲಿ ಸಾಂಪ್ರದಾಯಿಕ ತೆನೆ ಹಬ್ಬವನ್ನು ಕುಟುಂಬದ ಸದಸ್ಯರೆಲ್ಲರೂ ಸೇರಿ ಸಂಭ್ರಮದಿಂದ ಆಚರಿಸಿದರು.
ಹಬ್ಬದ ಅಂಗವಾಗಿ ಕುಟುಂಬದ ದೈವ-ದೇವರುಗಳಿಗೆ ಭಕ್ತಿಭಾವದಿಂದ ಪೂಜೆ ಸಲ್ಲಿಸಿ, ಎಲ್ಲರ ಒಳಿತಿಗಾಗಿ ಪ್ರಾರ್ಥಿಸಲಾಯಿತು. ಬಳಿಕ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಸೇರಿ ಸಂಪ್ರದಾಯದಂತೆ ತೆನೆ ಹಬ್ಬದ ಊಟವನ್ನು ಸವಿದರು.
ಕುಟುಂಬದ ಸದಸ್ಯರೆಲ್ಲರೂ ಒಂದೆಡೆ ಸೇರಿ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಗೌರವಿಸುವ ಮೂಲಕ ತೆನೆ ಹಬ್ಬವನ್ನು ಸಂತೋಷ, ಭಕ್ತಿ ಹಾಗೂ ಸೌಹಾರ್ದತೆಯಿಂದ ಆಚರಿಸಿದರು. ಈ ಆಚರಣೆಯು ಕುಟುಂಬದ ಒಗ್ಗಟ್ಟು ಮತ್ತು ಪರಂಪರೆಯ ಮೇಲಿನ ಅಭಿಮಾನವನ್ನು ಮತ್ತೊಮ್ಮೆ ಸಾರಿತು.

