
ಸೇಂಟ್ ಅಲೋಶಿಯಸ್ ವಿಶ್ವವಿದ್ಯಾಲಯದ ಅಲೋಶಿಯಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಇನ್ಫರ್ಮೇಶನ್ ಟೆಕ್ನಾಲಜಿ (AIMIT) ಕೇಂದ್ರದ ಸ್ಕೂಲ್ ಆಫ್ ಬಿಸಿನೆಸ್ ಆ್ಯಂಡ್ ಮ್ಯಾನೇಜ್ಮೆಂಟ್ನ ಎಂಬಿಎ ವಿಭಾಗದ ವತಿಯಿಂದ ‘ಭಾರತೀಯ ಜ್ಞಾನ ಪದ್ಧತಿ: ಸುಸ್ಥಿರ ಮತ್ತು ಅಂತರ್ಗತ ಅಭಿವೃದ್ಧಿಯ ಮರುಕಲ್ಪನೆ’ ಎಂಬ ವಿಷಯದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣವು ಅಕ್ಟೋಬರ್ 17ರಂದು ನಡೆಯಿತು.
ಸ್ಕೂಲ್ ಆಫ್ ಬಿಸಿನೆಸ್ ಆ್ಯಂಡ್ ಮ್ಯಾನೇಜ್ಮೆಂಟ್ನ ಡೀನ್ ಡಾ. ಜಸ್ಟಿನ್ ಜೇಮ್ಸ್ ಅವರು ಪ್ರಾಸ್ತಾವಿಕ ಮಾತನಾಡಿದರು. ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ಅಂತರರಾಷ್ಟ್ರೀಯ ವ್ಯವಹಾರ ವಿಭಾಗದ ಕಾವ್ಯ ಪಿ. ಹೆಗ್ಡೆ ‘ಭಾರತೀಯ ಜ್ಞಾನ ಪದ್ಧತಿ: ಸುಸ್ಥಿರ ವ್ಯವಹಾರ ಪದ್ಧತಿಗಳ ಮರುಚಿಂತನೆ’ ಎಂಬ ವಿಷಯದ ಕುರಿತು ಮಾತನಾಡಿ ಭಾರತೀಯ ಜ್ಞಾನ ಪರಂಪರೆಯ ತತ್ವಗಳನ್ನು ಆಧುನಿಕ ವ್ಯವಹಾರ ನಿರ್ವಹಣೆಯೊಂದಿಗೆ ಸಂಯೋಜಿಸುವುದು ಹಾಗೂ ಸುಸ್ಥಿರ ವ್ಯವಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಪ್ರತಿಪಾದಿಸಿದರು.
ಉಪನ್ಯಾಸಕ ಡಾ. ವೆಂಕಟೇಶ ನಾಯಕ್ ‘ಭಾರತೀಯ ಜ್ಞಾನ ಪದ್ಧತಿ ಮತ್ತು ಅಂತರ್ಗತ ಅಭಿವೃದ್ಧಿ: ಹೆಚ್ಚು ಒಳಗೊಳ್ಳುವ ಸಮಾಜಕ್ಕಾಗಿ ಸ್ಥಳೀಯ ಜ್ಞಾನದ ಬಳಕೆ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ವಿಶ್ವವಿದ್ಯಾಲಯದ ಎಂಬಿಎ ವಿಭಾಗದ ಮುಖ್ಯಸ್ಥೆ ಡಾ. ಪಿ.ವಿ. ಸುಮಿತಾ ಹಾಗೂ ಕಾರ್ಯಕ್ರಮ ಸಂಯೋಜಕ ಡಾ. ಸ್ಟೀವನ್ ಡಿ. ಸೋಜಾ ಎನ್. ಉಪಸ್ಥಿತರಿದ್ದರು.
ಅಮೃತಾ ಕಾರ್ಯಕ್ರಮ ನಿರೂಪಿಸಿದರು. ಕ್ಯಾರಲ್ ಸ್ವಾಗತಿಸಿದರು. ನಿಖಿತಾ ವಂದಿಸಿದರು.
.
