ಮೂಡುಬಿದಿರೆಯಲ್ಲಿ ಶಾರದಾನುಗ್ರಹ ಮತ್ತು ಸಿರಿಪುರ ಪ್ರಶಸ್ತಿ ಪ್ರಧಾನ

0
15

ಮೂಡುಬಿದಿರೆಯ ಪೊನ್ನೇ ಚಾರಿ ಸಾರ್ವಜನಿಕ ಶ್ರೀ ಶಾರದೋತ್ಸವದ ವೇದಿಕೆಯಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮೂಡುಬಿದಿರಿಯ ಹಿರಿಯ ವೈದ್ಯರಾದ ಡಾ. ಪದ್ಮನಾಭ ಉಡುಪ ಅವರಿಗೆ ಶಾರದಾನುಗ್ರಹ ಪ್ರಶಸ್ತಿ ಮತ್ತು ಹಿರಿಯ ಉದ್ಯಮಿಗಳು, ಸಮಾಜ ಸೇವಕರು ಆಗಿರುವ ನಾರಾಯಣ ಪಿ.ಎಂ. ಅವರಿಗೆ ಸಿರಿಪುರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಪೊನ್ನೆಚಾರಿ ಶಾರದಾ ವೇದಿಕೆಯಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿರುವ ಶ್ರೀ ಅಶೋಕ್ ಕಾಮತ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಕೆ. ಶ್ರೀಪತಿ ಭಟ್ ಅವರು ಪ್ರಶಸ್ತಿಯ ಹಿನ್ನೆಲೆ ಮತ್ತು ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಸಲ್ಲಿಸಿದರು. ಮೂಡುಬಿದಿರೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ, ಸಾಮಾಜಿಕ ಮುಂದಾಳು ಸುದರ್ಶನ ಎಂ. ಅವರು ಪ್ರಶಸ್ತಿ ಪುರಸ್ಕೃತರ ಬಗ್ಗೆ ಅಭಿನಂದನ ಭಾಷಣ ಮಾಡಿದರು. ಹುದ್ದೆಮ್ಮಿ ಉದ್ಯಮಿ ನಾರಾಯಣ ಪಿ.ಎಂ. ಅವರು ತಮಗೆ ಪ್ರಶಸ್ತಿ ಬಂದ ಬಗ್ಗೆ ಸಂತೋಷ ವ್ಯಕ್ತಪಡಿಸಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಸುರಕ್ಷಿತ ಚಾಲನೆಗಾಗಿ ಸಾರಿಗೆ ಇಲಾಖೆಯಿಂದ ಮತ್ತು ಸರಕಾರದಿಂದ ಚಿನ್ನದ ಪದಕವನ್ನು ಪಡೆದಿರುವ ಮೂಡುಬಿದಿರಿಯ ಹಿರಿಯ ಚಾಲಕರಾದ ಶ್ರೀ ಗೋಪಾಲ ಎಂ. ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಶಾರದಾನುಗ್ರಹ ಪ್ರಶಸ್ತಿ ಪಡೆದ ಡಾ.ಪದ್ಮನಾಭ ಉಡುಪ, ಪೊನ್ನೆಚಾರಿ ಶಾರದೋತ್ಸವದ ರೂವಾರಿ ಅಶೋಕ್ ಕಾಮತ್, ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ರಾಮಕೃಷ್ಣ ಶಿರೂರು, ಬೆಂಗಳೂರಿನ ಉದ್ಯಮಿ ವಿಜಯ್ ಕುಮಾರ್ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾರದೋತ್ಸವದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಡಾ. ರಾಮಕೃಷ್ಣ ಶಿರೂರು ಪ್ರಾಸ್ತಾವಿಕ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಅಧ್ಯಾಪಕ ಸುರೇಂದ್ರ ಪೂಜಾರಿ ಧನ್ಯವಾದ ಸಲ್ಲಿಸಿದರು. ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ನಾಗರತ್ನ ಶಿರೂರು ಕಾರ್ಯಕ್ರಮ ನಿರ್ವಹಿಸಿ ಸನ್ಮಾನ ಪತ್ರ ವಾಚಿಸಿದರು.