ಸಿಡಿಎಸ್‍ಎಲ್‍ನಿಂದ ರೀಇಮ್ಯಾಜಿನ್ ಐಡಿಯಾಥಾನ್ ಸ್ಪರ್ಧೆ

0
10

ಮಂಗಳೂರು : ಏಷ್ಯಾದ ಪ್ರಪ್ರಥಮ ಷೇರು ಮಾರುಕಟ್ಟೆ ಲಿಸ್ಟೆಡ್ ಡೆಪಾಸಿಟರಿ ಸಂಸ್ಥೆ ಹಾಗೂ 19 ಕೋಟಿಗೂ ಅಧಿಕ ಡಿಮ್ಯಾಟ್ ಖಾತೆಗಳ ಅತ್ಯಂತ ವಿಶ್ವಾಸಾರ್ಹ ಸುರಕ್ಷಕ ಕಸ್ಟೋಡಿಯನ್ ಆಗಿರುವ ಸೆಂಟ್ರಲ್ ಡೆಪಾಸಿಟರಿ ಸರ್ವಿಸಸ್ (ಇಂಡಿಯಾ) ಲಿಮಿಟೆಡ್ (ಸಿಡಿಎಸ್‍ಎಲ್), ರಾಷ್ಟ್ರಮಟ್ಟದ ರೀಇಮ್ಯಾಜಿನ್ ಐಡಿಯಾಥಾನ್ 2.0 ಸ್ಪರ್ಧೆಯನ್ನು ಪ್ರಕಟಿಸಿದೆ.

ಪ್ರಸ್ತುತ ದಿನಗಳಲ್ಲಿ ಅತ್ಯಂತ ವೇಗವಾಗಿ ವೈವಿಧ್ಯಮಯಗೊಳ್ಳುತ್ತಿರುವ ಹಾಗೂ ಹೆಚ್ಚು ಡಿಜಿಟಲ್ ತಂತ್ರಜ್ಞಾನಕ್ಕೆ ತೆರೆದುಕೊಳ್ಳುತ್ತಿರುವ ಹೂಡಿಕೆದಾರರ ಬೃಹತ್ ವರ್ಗಕ್ಕಾಗಿ ಆರ್ಥಿಕ ಸಾಕ್ಷರತೆ ಮತ್ತು ಸೈಬರ್ ಭದ್ರತೆಯನ್ನು ತಳಮಟ್ಟದಿಂದಲೇ ಬಲಪಡಿಸುವಂತಹ ಅತ್ಯಾಧುನಿಕ ಹಾಗೂ ಸೃಜನಶೀಲ ಪರಿಹಾರಗಳನ್ನು ರೂಪಿಸುವಂತೆ ದೇಶದ ಸಮಸ್ತ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಸ್ಪರ್ಧೆ ಮುಕ್ತವಾಗಿರುತ್ತದೆ ಎಂದು ಎಂಡಿ ಹಾಗೂ ಸಿಇಓ ನೆಹಾಲ್ ವೋರಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ತಾವು ಪ್ರಸ್ತುತಪಡಿಸುವ ನಾವೀನ್ಯತೆಯ ಪರಿಹಾರಕ್ಕೆ ಅತ್ಯಂತ ಸೂಕ್ತವೆನಿಸುವ ಯಾವುದೇ ತಾಂತ್ರಿಕ ವೇದಿಕೆ, ಮಾದರಿ ಅಥವಾ ವಿಧಾನವನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಸ್ಪರ್ಧೆಗೆ ವಿದ್ಯಾರ್ಥಿಗಳ ಆನ್‍ಲೈನ್ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಅಂತಿಮ ಸುತ್ತಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಅಗ್ರ ಐದು ವಿಜೇತ ತಂಡಗಳಿಗೆ ಒಟ್ಟು 11.5 ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು ವಿತರಿಸಲಾಗುವುದು ಎಂದು ವಿವರಿಸಿದ್ದಾರೆ.

ಸ್ಪರ್ಧೆಯ ನೋಂದಣಿ ಪ್ರಕ್ರಿಯೆ, ನಿರ್ದಿಷ್ಟ ಸಮಸ್ಯೆಗಳ ವಿವರಣೆ, ಮೌಲ್ಯಮಾಪನದ ಮಾನದಂಡಗಳು, ನಿಯಮಾವಳಿಗಳು ಹಾಗೂ ಮುಖ್ಯ ದಿನಾಂಕಗಳ ಸಂಪೂರ್ಣ ಮಾಹಿತಿಗಾಗಿ ಆಸಕ್ತ ವಿದ್ಯಾರ್ಥಿಗಳು ಸಿಡಿಎಸ್‍ಎಲ್ ರೀಇಮ್ಯಾಜಿನ್ ಐಡಿಯಾಥಾನ್‍ನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದು: https://ideathon.cdslindia.com/.