ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0
30

ಸಜೀಪ ಮುನ್ನೂರು : ಮುಗುಳಿಯ ಸಜೀಪ ಮುನ್ನೂರು ಕ್ಷೇತ್ರದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿಸೆಂಬರ್ 14 ಮತ್ತು 15ರಂದು ನಡೆಯಲಿರುವ ವರ್ಷಾವಧಿ ಜಾತ್ರಾ ಮಹೋತ್ಸವ ಹಾಗೂ ಪಂಚಮಿ–ಷಷ್ಠಿ ಪೂಜೋತ್ಸವದ ಆಮಂತ್ರಣ ಪತ್ರಿಕೆಯನ್ನು ಸಜೀಪ ಮಾಣೆಗಾಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರು ಶ್ರೀ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಿದರು.

ಡಿಸೆಂಬರ್ 14ರ ಸೋಮವಾರ ಮತ್ತು ಡಿಸೆಂಬರ್ 15ರ ಮಂಗಳವಾರ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳ ಸಿದ್ಧತೆಯ ಅಂಗವಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನೆರವೇರಿತು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅದ್ರುಕ್ಕು ಜಯಶಂಕರ ಬಾ ಶ್ರಿತಾಯ, ಅರ್ಚಕ ಕೃಷ್ಣ ಭಟ್, ಸದಸ್ಯರಾದ ಹರಿಪ್ರಸಾದ್ ಭಂಡಾರಿ ಆಳ್ವರಪಾಲು, ಶ್ರೀನಿವಾಸ ನಾಯಕ್ ದಾಸರಗುಡ್ಡೆ, ರಾಜು ಪೂಜಾರಿ ಜುಮಾದಿಪಾಲು, ಕಾವ್ಯಶ್ರೀ ಎಂ. ಮಡಿವಾಳ ಪಡ್ಪು, ಎನ್.ಕೆ. ಶಿವ, ಧನಂಜಯ ಶೆಟ್ಟಿ ಹಾಗೂ ಕವಿತಾ ಉಪಸ್ಥಿತರಿದ್ದರು.