ಕಾಸರಗೋಡು ಕನ್ನಡ ಗ್ರಾಮದಲ್ಲಿ ನವಂಬರ್ 8 ಕ್ಕೆ ಜಿ.ಎಸ್ ಶಿವರುದ್ರಪ್ಪ ಜನ್ಮ ಶತಮಾನೋತ್ಸವ ಭಾವಗೀತೆಗಳ ಗಾಯನ- ಕವಿಗೋಷ್ಠಿಗೆ ಆಹ್ವಾನ

0
10

ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ಕಾಸರಗೋಡು ಇದರ 37ನೇ ವಾರ್ಷಿಕ ಮಹಾಸಭೆಯ ಸಿದ್ಧತಾ ಸಭೆಯು ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆಯಿತು .

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆಯಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಅಂಗೀಕಾರ ನೀಡಲಾಯಿತು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ 2026/ 27ನೇ ಸಾಲಿನ 37ನೇ ವಾರ್ಷಿಕ ಮಹಾಸಭೆಯನ್ನು 2026 ಅಕ್ಟೋಬರ್ 25 ರಂದು ಸಂಜೆ ಗಂಟೆ 5.00ಕ್ಕೆ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆಸುವುದು ಎಂದು ತೀರ್ಮಾನಿಸಲಾಯಿತು. 2026 ನವಂಬರ್ 1ರಂದು ಬೆಳಿಗ್ಗೆ ಗಂಟೆ 9.30ಕ್ಕೆ ಕಾಸರಗೋಡು ಜಿಲ್ಲಾ ಕನ್ನಡ ರಾಜ್ಯೋತ್ಸವ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು.

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕಾಸರಗೋಡು ಇದರ 36ನೇ ಸಂಸ್ಥಾಪನಾ ವರ್ಷಾಚರಣೆಯನ್ನು 2026 ನವಂಬರ್ 4 ರಂದು ಸಂಜೆ ಗಂಟೆ 4.00 ಕ್ಕೆ ಏರ್ಪಡಿಸುವುದು.
ಕನ್ನಡ ಮತ್ತು ಸoಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ,ಬೆಂಗಳೂರು ಹಾಗೂ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕಾಸರಗೋಡು ಇದರ ಸಹಯೋಗದಲ್ಲಿ ಶ್ರೀ ಸಿರಿಗೇರಿ ಯರಿಸ್ವಾಮಿ, ಅನ್ನಪೂರ್ಣ ಪಬ್ಲಿಕೇಶನ್ಸ್ ಮತ್ತು ಕ್ರಿಯೇಷನ್ಸ್, ಸಿರಿಗೇರಿ ಬಳ್ಳಾರಿ ಜಿಲ್ಲೆ ಇದರ ನೇತೃತ್ವದಲ್ಲಿ ಜಿ.ಎಸ್. ಶಿವರುದ್ರಪ್ಪ ಜನ್ಮ ಶತಮಾನೋತ್ಸವ ಸಮಾರಂಭ ಹಾಗೂ ಭಾವಗೀತೆಗಳ ಗಾಯನ ಮತ್ತು ಕವಿಗೋಷ್ಠಿಯನ್ನು 2026 ನವಂಬರ್ 8 ಆದಿತ್ಯವಾರದಂದು ಬೆಳಿಗ್ಗೆ ಗಂಟೆ 10.00 ರಿಂದ 1.00 ರ ತನಕ ಹಮ್ಮಿಕೊಳ್ಳಲಾಗುವುದು.

ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕವಿಗಳಿಗೆ ಕವಿಗೋಷ್ಠಿ ಮತ್ತು ಗಾಯಕರಿಗೆ ಭಾವಗೀತೆಗಳ ಗಾಯನಕ್ಕೆ ಅವಕಾಶ ನೀಡಲಾಗಿದೆ. ಆಸಕ್ತರು ತಮ್ಮ ಹೆಸರನ್ನು ನೋಂದಾಯಿಸುವವರು ಶಿವರಾಮ ಕಾಸರಗೋಡು, ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕನ್ನಡ ಗ್ರಾಮ, ಮೀಪುಗುರಿ ,ಪಾರೆಕಟ್ಟೆ- ಕನ್ನಡ ಗ್ರಾಮರಸ್ತೆ, ಕಾಸರಗೋಡು- 671121
ಮೊಬೈಲ್:
9448572016
ಇವರನ್ನು ಸಂಪರ್ಕಿಸಲು ಕೋರಲಾಗಿದೆ.