ಪ್ರಿಯದರ್ಶಿನಿ ಆಪರೇಟಿವ್ ಸೊಸೈಟಿ ಉಡುಪಿ ಶಾಖೆಯ ಉದ್ಘಾಟನೆ

0
10

ಹಳೆಯಂಗಡಿಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಪ್ರಿಯದರ್ಶಿನಿ ಆಪರೇಟಿವ್ ಸೊಸೈಟಿಯ ಐದನೆಯ ಉಡುಪಿ ಶಾಖೆಯ ಉದ್ಘಾಟಿನ ಸಮಾರಂಭ ಅಕ್ಟೋಬರ್ 25ರಂದು ನಡೆಯಿತು. ಉಡುಪಿ ತಾಲೂಕು ಕಚೇರಿಯ ಸಮೀಪದ ಸನಿಲ್ ಪ್ಲಾಜಾ ಕಟ್ಟಡದಲ್ಲಿ ನಡೆದ ಶಾಖೆಯ ಉದ್ಘಾಟನೆಯನ್ನು ಮುಲ್ಕಿ ಅರಮನೆ ಎಂ ದುಗ್ಗಣ್ಣ ಸಾವಂತರು ನಡೆಸಿ ಉತ್ತಮ ಸೇವೆ ನೀಡುತ್ತಿರುವ ಶಾಖೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. 50ಕ್ಕೂ ಹೆಚ್ಚು ಶಾಖೆಗಳನ್ನು ರಾಜ್ಯಾದ್ಯಂತ ತೆರೆಯುವಂತಾಗಲಿ ಎಂದು ಹಾರೈಸಿದರು.
ಮಾಜಿ ಸಚಿವ ಕೆ ಅಭಯ ಚಂದ್ರ ಜೈನ್ ದೀಪ ಪ್ರಜ್ವಲನೆ ಗೈದು ಗ್ರಾಹಕರ ಪ್ರೀತಿಯನ್ನು ಗಳಿಸಿರುವ ಈ ಸಂಸ್ಥೆ ಇನ್ನಷ್ಟು ಶಾಖೆಗಳನ್ನು ಹೊಂದಿ ಕಾರ್ಯ ಕ್ಷೇತ್ರವನ್ನು ರಾಜ್ಯ ಮಟ್ಟಕ್ಕೆ ವಿಸ್ತರಿಸಲಿ ಎಂದು ಆಶಿಸಿದರು. ಕರ್ನಾಟಕ ರಾಜ್ಯ ಹಾಲ ಉತ್ಪಾದಕರ ಒಕ್ಕೂಟದ ನಿರ್ದೇಶಕ ಡಾ ದೇವಿ ಪ್ರಸಾದ್ ಶೆಟ್ಟಿ ಭದ್ರತಾ ಕೊಠಡಿ ಉದ್ಘಾಟಿಸಿ ಸ್ವ ಸಹಾಯ ಗುಂಪಿಗೆ ಚಾಲನೆಯನ್ನು ನೀಡಿದರು.

ವೇದಿಕೆಯಲ್ಲಿ ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಲಾವಣ್ಯ ಕೆ ಆರ್, ಉಡುಪಿ ಜಿಲ್ಲಾ ಕೇಂದ್ರ ಸಹಕಾರಿ ಯೂನಿಯನ್ ನ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಸರಸ್ವತಿ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಸೂರ್ಯಕುಮಾರ್, ಉಡುಪಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಕಾಂಚನ್, ಡಾ ಬೆರಿಲ್ ಬೆರ್ನಾರ್ಡ್, ಕಟ್ಟಡ ಮಾಲೀಕ ಶಂಭು ಸನಿಲ್, ಸಿ ಇ ಓ ಸುದರ್ಶನ್ ಪೂಜಾರಿ, ಹಾಜರಿದ್ದರು. ಅಧ್ಯಕ್ಷ ಎಚ್ ವಸಂತ್ ಬೆರ್ನಾರ್ಡ್ ಸ್ವಾಗತಿಸಿದರು. ಪ್ರಕಾಶ್ ಕಿನ್ನಿಗೋಳಿ ಕಾರ್ಯಕ್ರಮ ನಿರ್ವಹಿಸಿದರು.

ವರದಿ ರಾಯಿ ರಾಜ ಕುಮಾರ್