
ಸೋಮವಾರಪೇಟೆ: ಕೊಡಗು ಜಿಲ್ಲೆಯ ಪ್ರಥಮ ರಾಜ್ಯಮಟ್ಟದ ಕರ್ನಾಟಕ ಅಮೆಚೂರ್ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ನ್ ಶಿಪ್ ಸೋಮವಾರಪೇಟೆಯ ಪಿ. ಎಂ.ಶ್ರೀ.ವಿ.ಎಂ.ಪಿ ಶಾಲೆಯಲ್ಲಿ ನಡೆಯಿತು.

ಕೊಡಗಿನಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಸೋಮವಾರಪೇಟೆ ಪಿ.ಎಂ. ಶ್ರೀ.ವಿ.ಎ.ಪಿ.ಶಾಲೆಯ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ರಿತನ್ ಡಿ.ಎಸ್. ಹಾಗೂ 3ನೇ ತರಗತಿ ವಿದ್ಯಾರ್ಥಿ ರಿಷಿ ಡಿ.ಎಸ್ ಬೆಳ್ಳಿ ಪದಕ ಗಳಿಸಿ ಸಾಧನೆ ಮಾಡಿರುತ್ತಾರೆ .
ಕುಮಾರ ರಿತನ್ ಡಿ.ಎಸ್ ಈ ವರ್ಷ ನೇಪಾಳದ ಕಟ್ಮಂಡುವಿನಲ್ಲಿ ನಡೆದ ಮೂರನೇ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ ಶಿಪ್ನಲ್ಲಿ ಕೊಡಗು ಜಿಲ್ಲೆಯಿಂದ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿ ಬೆಳ್ಳಿ ಪದಕ ಪಡೆದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು.

ಈ ಇಬ್ಬರು ಸಹೋದರರು ಸೋಮವಾರಪೇಟೆಯ ಎಡವನಾಡು ಗ್ರಾಮದ ಆಶಾ ಹಾಗೂ ಚೇತನ್ ದಂಪತಿಯ ಪುತ್ರರಾಗಿದ್ದಾರೆ
ವರದಿ: ಪ್ರಿತುನ್ ಪೂವಣ್ಣ
