
ಭರತಾಂಜಲಿ (ರಿ.) ಕೊಟ್ಟಾರ ಮಂಗಳೂರು ಇವರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಪುರಭವನದಲ್ಲಿ ಹಮ್ಮಿಕೊಂಡಿರುವ ಜಲತರಂಗ ಜುಗಲ್ ಬಂಧಿ, ಜಲಾಂಜಲಿ, ನೃತ್ಯಾಮೃತ್ಯಂ 2026 ಕಾರ್ಯಕ್ರಮವನ್ನು ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನದ ಭಾರತೀ ಶ್ರೀಗಳವರು ನಟರಾಜನಿಗೆ ದೀಪ ಬೆಳಗಿಸಿ ಅರತಿಮಾಡಿ ವಿದುಷಿ ಪ್ರತಿಮಾ ಶ್ರೀಧರ್ ಈವರಿಗೆ ನಟುವಾಂಗ ನೀಡಿ ಕಾರ್ಯಕ್ರಮ ಉದ್ಘಾಟಿಸಿದರು.
ಭರತಾಂಜಲಿಯ ನಿರ್ದೇಶಕ ಗುರು ಶ್ರೀಧರ ಹೊಳ್ಳ, ನೃತ್ಯ ನಿರ್ದೇಶಕಿ ಪ್ರತಿಮಾ ಶ್ರೀಧರ್, ಸಹ ಶಿಕ್ಷಕಿ ವಿದುಷಿ ಪ್ರಕ್ಷಿಲ ಜೈನ್, ಮುಖ್ಯ ಅತಿಥಿ ಅಗರಿ ರಾಘವೇಂದ್ರ ರಾವ್, ಜಲತರಂಗ ಕಲಾವಿದರಾದ ವಿದುಷಿ ಶಶಿಕಲಾ ದಾನಿ ಡಾ. ಸುಜ್ಞಾನ ದಾನಿ ಮೊದಲಾದವರು ಉಪಸ್ಥಿತರಿದ್ದರು.
