ಡಿ. 20ರಂದು ಬ್ರಹ್ಮಾವರದಲ್ಲಿ ರಾಮಕ್ಷತ್ರಿಯ ವೃತ್ತಿಪರರ ಸಮಾವೇಶ

0
10

ಬ್ರಹ್ಮಾವರ : ರಾಮಕ್ಷತ್ರಿಯ ವೃತ್ತಿಪರರ ಸಮಾವೇಶವು ಡಿಸೆಂಬರ್ 20ರಂದು ಬ್ರಹ್ಮಾವರದ ರಾಷ್ಟ್ರೀಯ ಹೆದ್ದಾರಿ 66ರ ದೇವಕಿ ಕೃಷ್ಣ ಕನ್ವೆನ್ಶನ್ ಹಾಲ್‌ನಲ್ಲಿ ನಡೆಯಲಿದೆ.

ಸಮಾವೇಶದಲ್ಲಿ ವೈದ್ಯರು, ಎಂಜಿನಿಯರ್‌ಗಳು, ವಕೀಲರು ಹಾಗೂ ಚಾರ್ಟರ್ಡ್ ಅಕೌಂಟೆಂಟ್‌ಗಳು ಭಾಗವಹಿಸಲಿದ್ದಾರೆ. ರಾಮಕ್ಷತ್ರಿಯ ಸಮುದಾಯದ ವೃತ್ತಿಪರರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.

ರಾಮಕ್ಷತ್ರಿಯ ಸಂಘದ ಎಲ್ಲ ಪದಾಧಿಕಾರಿಗಳಿಗೂ ಸಮಾವೇಶಕ್ಕೆ ಆಹ್ವಾನ ನೀಡಲಾಗಿದ್ದು, ಸಮುದಾಯದ ವೃತ್ತಿಪರರು ಹಾಗೂ ಸಂಘದ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.