ಉಡುಪಿ : ನಗರದ ಕರಾವಳಿ ಬೈಪಾಸ್ನ ಸರ್ವಿಸ್ ರಸ್ತೆಯ ಸಮೀಪ ಕುಸಿದು ಬಿದ್ದು ಅಸ್ವಸ್ಥ ಸ್ಥಿತಿಯಲ್ಲಿದ್ದ ಅಪರಿಚಿತ ಮಹಿಳೆಯೊಬ್ಬರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಸ್ಥಳೀಯ ಮಹಿಳೆಯರ ನೆರವಿನಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ ಘಟನೆ ಮಂಗಳವಾರ ನಡೆದಿದೆ.

ಮಹಿಳೆಯೊಂದಿಗೆ ಮತ್ತೊಬ್ಬ ಮಹಿಳೆಯೂ ಇದ್ದು, ಅವರು ಭೀತಿಗೊಳಗಾಗಿ ಸ್ಥಳದಿಂದ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಅಸ್ವಸ್ಥ ಮಹಿಳೆಯನ್ನು ಹಾವೇರಿ ಜಿಲ್ಲೆಯ ಗುಂಡಗಟ್ಟಿಯ ರೂಪಾ (31) ಎಂದು ಶಂಕಿಸಲಾಗಿದೆ. ಮಹಿಳೆಯ ವಾರಸುದಾರರು ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.

