ಜಾಗತಿಕ ಬಂಟರ ಒಕ್ಕೂಟದ ಸಭಾಭವನ ಕಾಮಗಾರಿ ಶೀಘ್ರ ಪೂರ್ಣ

0
13

ಮಂಗಳೂರು :ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ನಿರ್ಮಾಣಗೊಳ್ಳಲಿರುವ ಸಭಾಭವನದ ಕಾಮಗಾರಿ ವಹಿಸಿಕೊಂಡಿರುವ ಎಲ್ಲಾ ಟೆಂಡರ್ ದಾರರ ವಿಶೇಷ ಸಭೆಯು ಅ15ರಂದು ಗುರುವಾರ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಶ್ರೀ ಪ್ರವೀಣ್ ಭೋಜ ಶೆಟ್ಟಿ ಆಡಳಿತ ಕಚೇರಿ ಮೂಲ್ಕಿ ಇಲ್ಲಿ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿತು.

ಸಭೆಯಲ್ಲಿ ಇಂಜಿನಿಯರ್ ಗೋಪಾಲ್ ಭಟ್ ಮತ್ತು ಸಿವಿಲ್ ಕಂಟ್ರಾಕ್ಟರ್ ಶಿವಪ್ರಸಾದ್ ರೈ ಯವರು ಹಾಗೂ ಎಲೆಕ್ಟ್ರಿಕಲ್ ಸೌಂಡ್ ಸಿಸ್ಟಮ್, ಸ್ಟೇಜ್ ಅರೆಜ್ಮೆಂಟ್, ಫಾಲ್ ಸೀಲಿಂಗ್, ಎ. ಸಿ. ರೂಫಿಂಗ್, ಕಾರ್ನಿಸ್, ಹಾಂಗರ್, ವೆಲ್ಡಿಂಗ್ ಇತರ ಎಲ್ಲಾ ವಿಚಾರದ ಕುರಿತು ಆಯಾ ಕಂಟ್ರಾಕ್ಟ್ ದಾರರಲ್ಲಿ ಚರ್ಚಿಸಲಾಯಿತು.

ಅಲ್ಲದೆ ಕಾಮಗಾರಿ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಎಲ್ಲಾ ಕಂಟ್ರಾಕ್ಟ್ ದಾರರು ಅವರವರ ಕಾಮಗಾರಿಯನ್ನು ಡಿಸೆಂಬರ್ 31ರ ಒಳಗೆ ಖಡ್ಡಾಯವಾಗಿ ಪೂರ್ಣಗೊಳಿಸಿ ಕೊಡಬೇಕೆಂದು ತಿಳಿಸಲಾಯಿತು.

ಈ ಸಂದರ್ಭದಲ್ಲಿ ಒಕ್ಕೂಟದ ಗೌರವ ಕಾರ್ಯದರ್ಶಿ ಜಯಕರ್ ಶೆಟ್ಟಿ ಇಂದ್ರಾಳಿ, ಜೊತೆ ಕಾರ್ಯದರ್ಶಿ ಚಂದ್ರಹಾಸ್ ಡಿ. ಶೆಟ್ಟಿ ರಂಗೋಲಿ, ಸಂಚಾಲಕರಾದ ಕೊಲ್ಲಾಡಿ ಬಾಲಕೃಷ್ಣ ರೈ ಮತ್ತು ಕಾಮಗಾರಿ ವಹಿಸಿಕೊಂಡಿರುವ ಎಲ್ಲಾ ಕಂಟ್ರಾಕ್ಟ್ ದಾರರು ಉಪಸ್ಥಿತರಿದ್ದರು.