ಮುಲ್ಕಿ: ಮಾನಸಿಕ ಖಿನ್ನತೆ- ಕಿನ್ನಿಗೋಳಿ ಆಟೋ ಚಾಲಕ ಆತ್ಮಹತ್ಯೆ

0
93

ಮುಲ್ಕಿ : ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಸಮೀಪದ ಐಕಳ ಗ್ರಾಮದ ನೆಲ್ಲಿಗುಡ್ಡೆ ಎಂಬಲ್ಲಿ ಆಟೋ ಚಾಲಕರೊಬ್ಬರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರನ್ನು ಪಿಯುಸ್ ಡಿಸೋಜಾ (61) ಎಂದು ಗುರುತಿಸಲಾಗಿದೆ. ಮೃತ ಪಿಯುಸ್ ಡಿಸೋಜಾ ರವರು ಕಳೆದ 25 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಅನೇಕ ಬಾರಿ ಚಿಕಿತ್ಸೆ ಪಡೆದಿದ್ದರು. ಅವರು ಪ್ರತಿದಿನ ಬೆಳಿಗ್ಗೆ ನೆಲ್ಲಿಗುಡ್ಡೆಯ ಮನೆಯಿಂದ ಶೇಡಿ ಗುರಿ ವರೆಗೆ ವಾಕಿಂಗ್ ಹೋಗಿ ಬರುತ್ತಿದ್ದರು ಅದರಂತೆ ಬುಧವಾರ ಬೆಳಿಗ್ಗೆ ಮನೆಯಿಂದ ವಾಕಿಂಗ್ ಹೋದವರು ಬೆಳಿಗ್ಗೆ 8.30 ಆದರೂ ವಾಪಸ್ ಬರದೇ ಇರುವುದನ್ನು ಕಂಡು ಅನುಮಾನದಿಂದ ಮನೆಯವರು ಹುಡುಕಾಡಿದಾಗ ರಮದೀಯ ಸಲ್ದಾನ್ ಎಂಬವರ ಮನೆಯ ಹಿಂಬದಿಯ ಸಪೋಟ ಮರಕ್ಕೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಮೃತರ ಪತ್ನಿ ನೀಡಿದ ದೂರಿನಂತೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೃತರು ಕಳೆದ ಹಲವಾರು ವರ್ಷಗಳಿಂದ ಕಿನ್ನಿಗೋಳಿ ಆಟೋ ಚಾಲಕ ಮಾಲಕರ ಸಂಘದ ಪದಾಧಿಕಾರಿಯಾಗಿದ್ದು ಕಿನ್ನಿಗೋಳಿ ಮಾರುಕಟ್ಟೆ ಬಳಿಯ ಆಟೋ ಸ್ಟ್ಯಾಂಡ್ ಬಳಿ ಕಾರ್ಯ ನಿರ್ವಹಿಸುತ್ತಿದ್ದು ಜನಾನುರಾಗಿಯಾಗಿದ್ದರು.

ಅವರ ನಿಧನದ ಗೌರವ ಸೂಚಕವಾಗಿ ಕಿನ್ನಿಗೋಳಿ ಆಟೋ ಚಾಲಕರ ಮಾಲಕರ ಸಂಘದ ಸದಸ್ಯರು ಆಟೋ ಚಾಲನೆ ಸ್ಥಗಿತಗೊಳಿಸಿ ಸಂತಾಪ ವ್ಯಕ್ತಪಡಿಸಿದ್ದಾರೆ.