1 ಕೋಟಿ ವೆಚ್ಚದಲ್ಲಿ ಮಾದರಿಯಾಗಿ ರೂಪುಗೊಂಡ ಸ.ಹಿ.ಪ್ರಾ.ಶಾಲೆ, ಬೈಂದೂರು

0
17

ಬೈಂದೂರು : ಶಾಸಕರ ನೇತೃತ್ವದ ಸಮೃದ್ಧ ಬೈಂದೂರು, 300 ಟ್ರೀಸ್ ಯೋಜನೆಯಡಿ “ರೋಬೋ ಸಾಫ್ಟ್ ಟೆಕ್ನಾಲಜೀಸ್” ಅವರ CSR ನಿಧಿಯಿಂದ ನಿರ್ಮಾಣಗೊಂಡ ನೂತನ ಶಾಲಾ ಕೊಠಡಿಗಳು ಮತ್ತು ಭೀಮಾ ಗೋಲ್ಡ್ ಹಾಗೂ ಭೂಮಿ ಟ್ರಸ್ಟ್ ವತಿಯಿಂದ ನಿರ್ಮಾಣಗೊಂಡ ವಿವಿಧ ಅಭಿವೃದ್ಧಿ ಕಾರ್ಯಗಳ ಭವ್ಯ ಉದ್ಘಾಟನಾ ಸಮಾರಂಭವು ಅಕ್ಟೋಬರ್ 28ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಂದೂರಿನಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ ಗಂಟಿಹೊಳೆ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀರಾನ್ ಮಹಾನ್ ಸಿ.ಇ.ಓ ರೋಬೋ ಸಾಫ್ಟ್ ಟೆಕ್ನಾಲಜಿ ಉಡುಪಿ, ಸ್ಯಾಂಡ್ರಾ, ರೀನಾ ಮಲಿಕ್ ಮುಖ್ಯಸ್ಥರು ಮಾನವ ಸಂಪನ್ಮೂಲ ವಿಭಾಗ ರೋಬೋಸಾಫ್ಟಟೆಕ್ನಾಲಜಿ ಉಡುಪಿ, ರಾಜು ಪೂಜಾರಿ ಮಾಜಿ ಅಧ್ಯಕ್ಷರು ಜಿಲ್ಲಾ ಪಂಚಾಯತ್ ಉಡುಪಿ, ಸುರೇಶ್ ಬಟವಾಡಿ ಸದಸ್ಯರು ಜಿಲ್ಲಾ ಪಂಚಾಯತ್ ಉಡುಪಿ,
ನಾಗೇಶ್ ನಾಯ್ಕ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬೈಂದೂರು ವಲಯ, ಗಣೇಶ್ ಪೂಜಾರಿ ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ್ ಎಡ್ತರೆ, ಶ್ರೀಜಯಾನಂದ್ ಹೋಬಳಿ ದಾರ್ ಮಾಜಿ ಸದಸ್ಯರು ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಆಡಳಿತ ಮಂಡಳಿ, ರಾಜಶೇಖರ ದೇವಾಡಿಗ ಅಧ್ಯಕ್ಷರು ಕಾಲೇಜು ಅಭಿವೃದ್ಧಿ ಮಂಡಳಿ ಬೈಂದೂರು,
ಶೇಖರ್ ಪೂಜಾರಿ ಅಧ್ಯಕ್ಷರು ಸರ್ಕಾರಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೈಂದೂರು, ಪದವಿ ಪೂರ್ವ ಕಾಲೇಜು ಬೈಂದೂರಿನ ಪ್ರಾಂಶುಪಾಲರಾದ ವೆಂಕಟರಮಣ ಬಿ, ಸೂಲಿಯಣ್ಣಶೆಟ್ಟಿ ಗುತ್ತಿಗೆದಾರರು ಬೈಂದೂರು, ಜಗನ್ನಾಥ ಶೆಟ್ಟಿ ಗುತ್ತಿಗೆದಾರರು ಬೈಂದೂರು, ಸುಬ್ರಾಯ ಸೇರಿಗಾರ್ ಬೈಂದೂರು, ಸ.ಮಾ.ಹಿ. ಪ್ರಾ.ಶಾಲೆ ಬೈಂದೂರು ಇಲ್ಲಿನ ಮುಖ್ಯೋಪಾಧ್ಯಯರಾದ ಶ್ರೀ ಗಣಪತಿ ಹೋಬಳಿದಾರ್ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಶಾಲಾ ಅಭಿವೃದ್ಧಿ ಮತ್ತು ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ವೆಂಕಟರಮಣ ಎಚ್ ಧನ್ಯವಾದ ಸಲ್ಲಿಸಿದರು.

ಸರಸ್ವತಿ ಕೆಎ ಮತ್ತು ಶ್ರೀಮತಿ ವೀಣಾ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಸುಜಾತ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು .ರೋಬೋ ಸಾಫ್ಟ್ ನಾ ಚಕ್ರ ಶ್ರೀ ಗೋಪಾಲ್ ಕಾಮತ್ ಕಾರ್ತಿಕ್ ಶರತ್ ಉಪಸ್ಥಿತರಿದ್ದರು.