ಮಾನವೀಯತೆಗೆ ಸಾಕ್ಷಿಯಾದ ಸಾಯಿ ಮಾರ್ನಾಡು ಟ್ರಸ್ಟ್ : ಬಡವರ ಬಾಳಿಗೆ ಬೆಳಕಾದ ಸಂಘಟನೆ – ತನ್ನ 100ನೇ ಯೋಜನೆಯತ್ತ ಚಿತ್ತ

0
27

-ಮಂದಾರ ರಾಜೇಶ್

​ಮೂಡುಬಿದಿರೆ : ನಿರಂತರ ಸಮಾಜಮುಖಿ ಹಾಗೂ ಮಾನವೀಯ ಕಾರ್ಯಗಳ ಮೂಲಕ ಸಮಾಜದಲ್ಲಿ ಸೈ ಎನಿಸಿಕೊಂಡಿರುವ ಸಾಯಿ ಮಾರ್ನಾಡು ಸೇವಾ ಸಂಘ ಟ್ರಸ್ಟ್ (ರಿ.) ಅಮನಬೆಟ್ಟು, ಪಡು ಮಾರ್ನಾಡು ಸಂಸ್ಥೆಯು ಇದೀಗ ಮತ್ತೊಂದು ಶ್ಲಾಘನೀಯ ಮೈಲಿಗಲ್ಲಿಗೆ ಸಾಕ್ಷಿಯಾಗುತ್ತಿದೆ.

ಬಡವರ ಹಾಗೂ ಅಶಕ್ತರ ಕಣ್ಣೀರೊರೆಸುವ ಕಾಯಕದಲ್ಲಿ ನಿರತರಾಗಿರುವ ಈ ಸಂಘಟನೆಯು ತನ್ನ 100ನೇ ಯೋಜನೆಯನ್ನು ಸಫಲಗೊಲಿಸಲು ಸಿದ್ಧತೆ ನಡೆಸಿದೆ

​ಪಡುಮಾರ್ನಡು ಗ್ರಾಮದ ಮುರಗೋಳಿ ಪರಿಸರದ ಲಕ್ಷ್ಮಿ ಪೂಜಾರ್ತಿ ಅವರ ದುಸ್ಥಿತಿಯಲ್ಲಿದ್ದ ಸೂರನ್ನು ಸಂಪೂರ್ಣವಾಗಿ ನವೀಕರಿಸಲಾಗಿದ್ದು, ನೂತನ “ಶ್ರೀ ಲಕ್ಷ್ಮಿ ನಿಲಯ”ದ ಗೃಹಹೋಮ, ಹಸ್ತಾಂತರ ಹಾಗೂ ಬಡ ಕುಟುಂಬಗಳಿಗೆ ನೆರವು ನೀಡುವ ಸಮಾರಂಭವು ನವೆಂಬರ್ 01, 2026 (ಭಾನುವಾರ) ರಂದು ಜರುಗಲಿದೆ.

​ಶಾಸ್ತ್ರೋಕ್ತ ಧಾರ್ಮಿಕ ಕಾರ್ಯಕ್ರಮ ಹಾಗೂ ಸಭಾ ಸಮಾರಂಭ

​ಬೆಳಿಗ್ಗೆ 09:00 ಕ್ಕೆ ನೂತನ ಗೃಹದಲ್ಲಿ ಶಾಸ್ತ್ರೋಕ್ತವಾಗಿ ಗೃಹಹೋಮ ಹಾಗೂ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ.
​ಬೆಳಿಗ್ಗೆ 10:00 ಕ್ಕೆ ಸ್ಥಳೀಯ ಪ್ರತಿಭಾವಂತ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
​ಬೆಳಿಗ್ಗೆ 11:30 ಕ್ಕೆ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಸಂದರ್ಭದಲ್ಲಿ ಸಮಾಜದ 5 ಬಡ ಕುಟುಂಬಗಳಿಗೆ ಆರ್ಥಿಕ ಸಹಾಯಧನ ವಿತರಿಸಿ ಆಸರೆಯಾಗುವ ಮಹತ್ಕಾರ್ಯ ನೆರವೇರಲಿದೆ.

​ಗಣ್ಯರ ಉಪಸ್ಥಿತಿ

​ಈ ಸತ್ಕಾರ್ಯ ಮತ್ತು ಮಾನವೀಯ ಮಹೋತ್ಸವದಲ್ಲಿ ವಿವಿಧ ರಂಗಗಳ ಜನಪ್ರತಿನಿಧಿಗಳು, ಧಾರ್ಮಿಕ ಕ್ಷೇತ್ರದ ಪ್ರಮುಖರು, ಸ್ಥಳೀಯ ಮುಖಂಡರು ಹಾಗೂ ಸಂಘ-ಸಂಸ್ಥೆಗಳ ಗಣ್ಯರು ಭಾಗವಹಿಸಿ ಶುಭ ಹಾರೈಸಲಿದ್ದಾರೆ.

​ಸೇವಾ ಮನೋಭಾವದ ಈ ಪವಿತ್ರ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಊರಿನ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕಾಗಿ ಸಾಯಿ ಮಾರ್ನಾಡು ಸೇವಾ ಸಂಘ ಟ್ರಸ್ಟ್ (ರಿ.) ಇದರ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ವಿನಂತಿಸಿದ್ದಾರೆ.