ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಾಂತಾವರದ ಆಯುಷ್‌ಗೆ ಕಂಚಿನ ಪದಕ

0
25

ಬ್ರಹ್ಮಾವರ : ಬ್ರಹ್ಮಾವರದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಾಣೂರಿನ ಪ್ರಕೃತಿ ನ್ಯಾಷನಲ್ ಸ್ಕೂಲ್‌ನ ಆರನೇ ತರಗತಿ ವಿದ್ಯಾರ್ಥಿ ಆಯುಷ್ ಕುಲಾಲ ಅವರು ಕುಮಿಟೆ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ.

ಕಾಂತಾವರ ಗ್ರಾಮದ ಬಾರಾಡಿ ನಿವಾಸಿಗಳಾದ ಜಗದೀಶ್ ಕುಲಾಲ ಮತ್ತು ಜ್ಯೋತಿ ಕುಲಾಲ ದಂಪತಿಯ ಪುತ್ರನಾಗಿರುವ ಆಯುಷ್, ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪದಕ ಗಳಿಸುವ ಮೂಲಕ ಶಾಲೆ, ಕುಟುಂಬ ಹಾಗೂ ಊರಿಗೆ ಹೆಮ್ಮೆ ತಂದಿದ್ದಾರೆ.

ಕರಾಟೆ ಕ್ರೀಡೆಯ ಕುಮಿಟೆ ವಿಭಾಗದಲ್ಲಿ ತಮ್ಮ ಪ್ರತಿಭೆ ಹಾಗೂ ಕೌಶಲ್ಯವನ್ನು ಪ್ರದರ್ಶಿಸಿ ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿರುವ ಆಯುಷ್ ಅವರ ಸಾಧನೆಗೆ ಕಾಂತಾವರ ಕುಲಾಲ ಸಂಘದ ಸರ್ವ ಪದಾಧಿಕಾರಿಗಳು ಶುಭ ಹಾರೈಸಿದ್ದಾರೆ. ಎಂದು ಶುಭ ಹಾರೈಸಿದ್ದಾರೆ.