ನವೆಂಬರ್ 1ರಂದು ಕರ್ನಾಟಕ ಸಾಧಕ ರತ್ನ ಪ್ರಶಸ್ತಿ ಪ್ರದಾನ

0
4

ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ರಾಣೇಬೆನ್ನೂರಿನ ಜನಪರ ವಾಣಿ ಪ್ರಕಾಶನ ವತಿಯಿಂದ “ಕರ್ನಾಟಕ ಸಾಧಕ ರತ್ನ” ಪ್ರಶಸ್ತಿಯನ್ನು ಆಯೋಜಿಸಲಾಗಿದೆ.

ಸಾಹಿತ್ಯ, ಕಲೆ, ಶಿಕ್ಷಣ, ಸಂಗೀತ, ರಂಗಭೂಮಿ, ಚಿತ್ರರಂಗ, ಕೃಷಿ, ಕನ್ನಡ ಭಾಷೆ, ನಾಡು-ನುಡಿ, ಜಲ ಸಂರಕ್ಷಣೆ ಹಾಗೂ ವಿವಿಧ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಾಶನದ ಸಂಸ್ಥಾಪಕರು ಹಾಗೂ ಪ್ರಕಾಶಕರಾದ ಬಸವರಾಜ ಎಸ್. ಬಾಗೇವಾಡಿಮಠ ತಿಳಿಸಿದ್ದಾರೆ.

2026ರ ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆಯ್ಕೆಯಾದ ಸಾಧಕರಿಗೆ ಡಿಜಿಟಲ್ ಮಾಧ್ಯಮದ ಮೂಲಕ ಗೌರವಪೂರ್ವಕವಾಗಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ ಅವರ ಸೇವೆಯನ್ನು ಸಮಾಜಕ್ಕೆ ಪರಿಚಯಿಸುವುದು ಈ ಪ್ರಶಸ್ತಿಯ ಪ್ರಮುಖ ಉದ್ದೇಶವಾಗಿದೆ.

ಪ್ರಶಸ್ತಿಗೆ ಆಯ್ಕೆಯಾದ ಎಲ್ಲ ಸಾಧಕರಿಗೆ ಜನಪರ ವಾಣಿ ಪ್ರಕಾಶನದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಗಿದ್ದು, ಅವರ ಮುಂದಿನ ಸಾಧನೆಯ ಪಯಣ ಇನ್ನಷ್ಟು ಯಶಸ್ವಿಯಾಗಲಿ ಎಂದು ಶುಭ ಹಾರೈಸಲಾಗಿದೆ.

ಜನಪರ ವಾಣಿ ಪ್ರಕಾಶನದ ಸಂಸ್ಥಾಪಕರು ಮತ್ತು ಪ್ರಕಾಶಕರಾದ ಬಸವರಾಜ ಎಸ್. ಬಾಗೇವಾಡಿಮಠ ಅವರು ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿದ್ದಾರೆ.