ತಾವರೆಕೆರೆಯ ದೂರ ಸಂಪರ್ಕನಗರದ ಸಮುದಾಯ ಭವನದಲ್ಲಿ ನಡೆದ ‘ಗಝಲ್ ಕವಿಗೋಷ್ಠಿ’

0
6

5 ಶೇರುಗಳ ಗಜಲ್ ಎಂಬುದು ಹುಟ್ಟು ಸಾವಿನ ನಡುವಿನ ಬಾಲ್ಯ ಪ್ರೌಢ ವೃದ್ಧ್ಯಾಪ್ಯಗಳ ಅನುಭವ ಕಾವ್ಯ – ಡಾ ಸುರೇಶ ನೆಗಳಗುಳಿ

ಗಝಲ್ ಅನ್ನುವುದು ಎಲ್ಲಾ ಕಾವ್ಯಗಳ ರಾಣಿ ಇದನ್ನು ಅಭ್ಯಾಸ ಮಾಡಲು ತುಂಬಾ ಕಷ್ಟ ಆದರೆ ಒಮ್ಮೆ ಕಲಿತರೆ ನಾವು ಅದರ ದಾಸರಾಗುತ್ತೇವೆ. ತಬ್ಬಿ ಮುದ್ದಾಡುತ್ತೇವೆ. ಎಂದು ಗಝಲ್‌ನ ನಾನಾ ಸ್ವರೂಪಗಳನ್ನು ಸಭೀಕರ ಮತ್ತು ಬಂದಿರುವ ಕವಿಗಳ ಮುಂದೆ ತೆರೆದಿಟ್ಟವರು ಗಝಲ್ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ಗಝಲ್ ಕವಿ ವಿಮರ್ಶಕರಾದ ಸಿರಾಜ್ ಅಹಮ್ಮದ್ ನೆಲಮಂಗಲ.ಗಝಲ್ ಕವಿಗೋಷ್ಠಿಗೆ ಬಂದಿರುವ ಡಾ.ಶ್ರೀಶೈಲಮಾದಣ್ಣವರ, ಮುಖ್ಯ ಅತಿಥಿ ಸ್ಥಾನದಿಂದ ಗಝಲ್ ಬಗ್ಗೆ ಸಂದರ್ಭೋಚಿತವಾಗಿ ಮಾತನಾಡಿದರು ಹಾಗೇ ಇನ್ನೋರ್ವ ಮುಖ್ಯ ಅತಿಥಿಗಳಾದ ಡಾ.ಹಸೀನಾ ಹೆಚ್.ಕೆಯವರು ಕೂಡ ಸಂದರ್ಭೋಚಿತವಾಗಿ ಮಾತನಾಡಿದರು.

ನಂತರ ನಡೆದ ಕವಿಗೋಷ್ಠಿಯಲ್ಲಿ ಡಾ.ಹಸೀನಾ ಹೆಚ್.ಕೆ, ಡಾ.ಸುನಿಲ್ ಕುಮಾರ್ ಎಸ್, ಮಮತಾ ಕೆ.ಎಸ್, ನಾರಾಯಣ ಸ್ವಾಮಿ ಬಂಡಹಟ್ಟಿ, ಮಾಲಾಮೂರ್ತಿ ಕೊಡಗು, ರವಿ ವಿಠಲ ಅಲಿಬಾಳ, ಜ್ಯೋತಿ ಕುಂದರಗಿ ಮತ್ತು ರೇಣುಕಾಚಾರ್ಯ ಸ್ಥಾವರಮಠ ಕಲಬುರ್ಗಿ ಗಝಲ್ ಕವಿಗಳು ಗಝಲ್ ಕವನಗಳನ್ನು ವಾಚನ ಮಾಡಿದರು.
ನಂತರ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಡಾ.ಸುರೇಶ್ ನೆಗಳಗುಳಿ ಇವರು ಛಂದಸ್ಸಿನ ಪ್ರಕಾರ ಯಾವ ರೀತಿ ಹಾಡಿಗೆ ಸರಿಯಾಗಿ ಗಝಲ್ ರಚಿಸ ಬೇಕೆಂಬುದನ್ನು ಕವಿಗಳಿಗೆ ಮನದಟ್ಟು ಮಾಡುತ್ತಾ ಗಜಲ್ ಅಂದರೆ ಹುಟ್ಟು ಸಾವುಗಳ ನಡುವಿನ ಬಾಲ್ಯ ಪ್ರೌಢ ವೃದ್ಧ್ಯಾಪ್ಯ ಸಹಿತದ ಅನುಭವ ಕಾವ್ಯ. ಮೊದಲ ಶೇರು ಮತ್ಲ ಸರಿಯಾಗಿ ಹುಟ್ಟಿ ಕೊನೆಯ ಶೇರು ಮಕ್ತಾ ಸರಿಯಾದ ಅಂತ್ಯ ಕೊಟ್ಟರೆ ಮಧ್ಯದಲ್ಲಿ ಮೂರು ಶೇರುಗಳು ಉಪಮೇ ಸಹಿತ ಅನುಭವದ ವ್ಯಾಖ್ಯಾನ ಮಾಡಿದಾಗ ಅದೊಂದು ಉತ್ತಮ ಗಜಲ್ ಕಾವ್ಯ ಆಗುತ್ತದೆ ಎನ್ನುತ್ತಾ ತಮ್ಮ ಗಝಲ್ ಒಂದನ್ನು ವಾಚನ ಮಾಡಿದರು.

ನಂತರ ನೆಗಳಗುಳಿ ಅವರನ್ನು ಶಾಲು ಹಾರ ಪೇಟ ಹಾಕಿ ಸನ್ಮಾನಿಸಲಾಯಿತು.

ನಂತರ ಬಂದಂತಹ ಕವಿಗಳನ್ನು ಅತಿಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಸ್ವಾಗತವನ್ನು ಡಿ.ಆರ್ ಹರ್ಷವರ್ಧನ್ ಮಾಡಿದರೆ ಹಾ.ಮು.ಸತೀಶರು ವಂದನಾರ್ಪಣೆ ಮಾಡಿದರು ಕಾರ್ಯಕ್ರಮ ನಿರ್ವಹಣೆಯನ್ನು ರತ್ನಾ ಕೆ ಭಟ್ಟ ಪುತ್ತೂರು ನಿರ್ವಹಿಸಿದರು.