ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ : ನೂತನ ಧ್ವಜಮರ (ಕೊಡಿಮರ)ಸಮರ್ಪಣೆ ಸಂಪನ್ನ

0
26

ಕಾಪು : ಕುತ್ಯಾರು- ಪಾದೂರು-ಕಳತ್ತೂರು ಗ್ರಾಮಾಧಿಪತಿ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧ್ವಜಸ್ಥಂಭ ನಿರ್ಮಿಸಲು ಬಳಸುವ ನೂತನ ಸಾಗುವಾನಿ ಧ್ವಜಮರ ಸಮರ್ಪಣೆ ಕಾರ್ಯಕ್ರಮವು ಅ. 30 ರಂದು ನಡೆಯಿತು.

ಕಾರ್ಕಳ ಮಿಯ್ಯಾರಿನಿಂದ ತಂದ ಸುಮಾರು 48 ಅಡಿ ಉದ್ದದ ಸಾಗುವಾನಿ ಮರವನ್ನು ಕಳತ್ತೂರು ಶಾಂತಿಗುಡ್ಡೆ ಸರ್ಕಲ್ ನಿಂದ ಕಳತ್ತೂರು ದೇವಸ್ಥಾನದವರೆಗೆ ವಿವಿಧ ಚೆಂಡೆ, ವಾದ್ಯ ಘೋಷ ಮತ್ತು ವಿವಿಧ ಭಜನಾ ತಂಡಗಳ ಕುಣಿತ ಭಜನೆಯೊಂದಿಗೆ ಮೆರವಣಿಗೆಯಲ್ಲಿ ಶ್ರೀ ದೇಗುಲಕ್ಕೆ ತಂದು ಭಕ್ತರ ಸಮಕ್ಷಮದಲ್ಲಿ ಸಮರ್ಪಿಸಲಾಯಿತು.