ವೃತ್ತಿಯೊಂದಿಗೆ ಸಮಾಜ ಸೇವೆ ಮಾದರಿ ಡಾ. ಹರಿಕೃಷ್ಣ ಪುನರೂರು

0
13

ಮುಲ್ಕಿ; ಸಮಾಜದಲ್ಲಿ ಕಷ್ಟಗಳಿಗೆ ಸ್ಪಂದಿಸಿ ತನ್ನ ವೃತ್ತಿಯನ್ನುಮಾಡುವುದು ಇತರರಿಗೆ ಆದರ್ಶವಾಗಿದೆ ಎಂದು ಕರ್ನಾಟಕ ಸಾಹಿತ್ಯ ಪರಿಷತ್ತು ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಹೇಳಿದರು.

ಅವರು ಮುಲ್ಕಿ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಹೊಸ ಅಂಗಳ ತಿಂಗಳ ಬೆಳಕು ಹಾಗೂ ಸಾಧಕರಾದ ಶಿವರಾಮ ಎಸ್ ಸುವರ್ಣರವರಿಗೆ ಗೌರಾವಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮೊಗವೀರ ಮಾಸಿಕ ಪತ್ರಿಕೆಯ ಸಂಪಾದಕ ಅಶೋಕ್ ಸುವರ್ಣ ಮಾತನಾಡುತ್ತಾ ಫೋಟೋ ಗ್ರಾಫರ್ ಶಿವರಾಮ ಎಸ್ ಸುವರ್ಣರವರು ತನ್ನ ವೃತ್ತಿಯೊಂದಿಗೆ ಸಮಾಜ ಸೇವೆ ಮಾಡಿ ಇತರರಿಗೆ ಆದರ್ಶರಾಗಿದ್ದಾರೆ ಎಂದು ಹೇಳಿದರು.

ಇನ್ನೋರ್ವ ಅತಿಥಿ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಮುಲ್ಕಿ ವಲಯದ ಅಧ್ಯಕ್ಷ ಶ್ರೀನಿವಾಸ ಬಪ್ಪನಾಡು ಉಪಸ್ತಿತರಿದ್ದರು. ಚಿತ್ರಾಪು ಮೂಕಾಂಬಿಕಾ ಮಂದಿರದ ಕೇಶವಾನಂದ ಗುರೂಜಿ , ನಿವೃತ್ತ ಪ್ರಾಂಶುಪಾಲರು ವೈ. ಎನ್. ಸಾಲ್ಯಾನ್, ಜೋನ್ ಕ್ವಾಡ್ರಾಸ್, ಅತಿಕಾರಿಬೆಟ್ಟು ಗ್ರಾ.ಪಂ. ಮಾಜಿ ಅಧ್ಯಕ್ಷ ಮನೋಹರ ಕೋಟ್ಯಾನ್, ವಿಜಯ ಬ್ಯಾಂಕಿನ ನಿವೃತ್ತ ಅಧಿಕಾರಿ ಸುರೇಂದ್ರ ಜಿ. ಶೆಣೈ, ಸರೋಜಿನಿ ಸುವರ್ಣ, ಶೇಖರ್ ಪಿ ಪೂಜಾರಿ ಕೊಳಚಿಕಂಬಳ, ಹೊಸ ಅಂಗಣ ಸಂಪಾದಕ ಹರಿಶ್ಚಂದ್ರ ಪಿ. ಸಾಲ್ಯಾನ್, ವಾಸು ಪೂಜಾರಿ ಚಿತ್ರಾಪು, ವಿಜಯಾ ಹರಿಶ್ಚಂದ್ರ ಸಾಲ್ಯಾನ್, ಗೀತಾ ಗಣೇಶ್, ಸಾಧು ಅಂಚನ್ ಮಟ್ಟು, ವಿಜಯ ಕುಮಾರ್ ಕುಬೆವೂರು ಮತ್ತಿತರರು ಉಪಸ್ಥಿತರಿದ್ದರು. ಹರಿಶ್ಚಂದ್ರ ಪಿ ಸಾಲ್ಯಾನ್ ರವರು ಸ್ವಾಗತಿಸಿ, ಜೆಸಿ ದಿನೇಶ್ ಶೆಟ್ಟಿರವರು ವಂದನಾರ್ಪಣೆ ಮಾಡಿದ್ದರು. ರವಿಚಂದ್ರರವರು ಕಾರ್ಯಕ್ರಮ ನಿರೂಪಿಸಿದರು.

ವೃತ್ತಿಯೊಂದಿಗೆ ಸಮಾಜ ಸೇವೆ ಮಾದರಿ ಡಾ. ಹರಿಕೃಷ್ಣ ಪುನರೂರು

ಸಮಾಜದಲ್ಲಿ ಕಷ್ಟಗಳಿಗೆ ಸ್ಪಂದಿಸಿ ತನ್ನ ವೃತ್ತಿಯನ್ನುಮಾಡುವುದು ಇತರರಿಗೆ ಆದರ್ಶವಾಗಿದೆ ಎಂದು ಕರ್ನಾಟಕ ಸಾಹಿತ್ಯ ಪರಿಷತ್ತು ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಹೇಳಿದರು.

ಅವರು ಮುಲ್ಕಿ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಹೊಸ ಅಂಗಳ ತಿಂಗಳ ಬೆಳಕು ಹಾಗೂ ಸಾಧಕರಾದ ಶಿವರಾಮ ಎಸ್ ಸುವರ್ಣರವರಿಗೆ ಗೌರಾವಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮೊಗವೀರ ಮಾಸಿಕ ಪತ್ರಿಕೆಯ ಸಂಪಾದಕ ಅಶೋಕ್ ಸುವರ್ಣ ಮಾತನಾಡುತ್ತಾ ಫೋಟೋ ಗ್ರಾಫರ್ ಶಿವರಾಮ ಎಸ್ ಸುವರ್ಣರವರು ತನ್ನ ವೃತ್ತಿಯೊಂದಿಗೆ ಸಮಾಜ ಸೇವೆ ಮಾಡಿ ಇತರರಿಗೆ ಆದರ್ಶರಾಗಿದ್ದಾರೆ ಎಂದು ಹೇಳಿದರು. ಇನ್ನೋರ್ವ ಅತಿಥಿ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಮುಲ್ಕಿ ವಲಯದ ಅಧ್ಯಕ್ಷ ಶ್ರೀನಿವಾಸ ಬಪ್ಪನಾಡು ಉಪಸ್ತಿತರಿದ್ದರು.

ಚಿತ್ರಾಪು ಮೂಕಾಂಬಿಕಾ ಮಂದಿರದ ಕೇಶವಾನಂದ ಗುರೂಜಿ , ನಿವೃತ್ತ ಪ್ರಾಂಶುಪಾಲರು ವೈ. ಎನ್. ಸಾಲ್ಯಾನ್, ಜೋನ್ ಕ್ವಾಡ್ರಾಸ್, ಅತಿಕಾರಿಬೆಟ್ಟು ಗ್ರಾ.ಪಂ. ಮಾಜಿ ಅಧ್ಯಕ್ಷ ಮನೋಹರ ಕೋಟ್ಯಾನ್, ವಿಜಯ ಬ್ಯಾಂಕಿನ ನಿವೃತ್ತ ಅಧಿಕಾರಿ ಸುರೇಂದ್ರ ಜಿ. ಶೆಣೈ, ಸರೋಜಿನಿ ಸುವರ್ಣ, ಶೇಖರ್ ಪಿ ಪೂಜಾರಿ ಕೊಳಚಿಕಂಬಳ, ಹೊಸ ಅಂಗಣ ಸಂಪಾದಕ ಹರಿಶ್ಚಂದ್ರ ಪಿ. ಸಾಲ್ಯಾನ್, ವಾಸು ಪೂಜಾರಿ ಚಿತ್ರಾಪು, ವಿಜಯಾ ಹರಿಶ್ಚಂದ್ರ ಸಾಲ್ಯಾನ್, ಗೀತಾ ಗಣೇಶ್, ಸಾಧು ಅಂಚನ್ ಮಟ್ಟು, ವಿಜಯ ಕುಮಾರ್ ಕುಬೆವೂರು ಮತ್ತಿತರರು ಉಪಸ್ಥಿತರಿದ್ದರು. ಹರಿಶ್ಚಂದ್ರ ಪಿ ಸಾಲ್ಯಾನ್ ರವರು ಸ್ವಾಗತಿಸಿ, ಜೆಸಿ ದಿನೇಶ್ ಶೆಟ್ಟಿರವರು ವಂದನಾರ್ಪಣೆ ಮಾಡಿದ್ದರು. ರವಿಚಂದ್ರರವರು ಕಾರ್ಯಕ್ರಮ ನಿರೂಪಿಸಿದರು.