ಕರಾವಳಿಯಲ್ಲಿ ಬಿರುಗಾಳಿ ಸಹಿತ ಮಳೆ ಮುನ್ಸೂಚನೆ

0
4

ಹವಾಮಾನ ಇಲಾಖೆಯಿಂದ ಸಾರ್ವಜನಿಕರಿಗೆ ತುರ್ತು ಎಚ್ಚರಿಕೆ

​ಮಂಗಳೂರು/ಉಡುಪಿ ಜಿಲ್ಲೆಯ ಹಲವು ಕಡೆಗಳಲ್ಲಿ ಮುಂದಿನ ಮೂರು ಗಂಟೆಗಳಲ್ಲಿ ಕರಾವಳಿ ಭಾಗದಲ್ಲಿ (ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ) ಗಂಟೆಗೆ 45 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಗಳಿದ್ದು, ಗುಡುಗು ಸಿಡಿಲು ಸಹಿತ ಸಾಧಾರಣದಿಂದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

​ಸಾರ್ವಜನಿಕರ ಜೀವ-ಹಾನಿ ಹಾಗೂ ಆಸ್ತಿ-ಪಾಸ್ತಿ ಹಾನಿ ತಪ್ಪಿಸಲು ಹವಾಮಾನ ಇಲಾಖೆ ಮತ್ತು ಜಿಲ್ಲಾಡಳಿತ ಕೆಳಗಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.

​ಎಲೆಕ್ಟ್ರಾನಿಕ್ ಉಪಕರಣಗಳ ಪ್ಲಗ್ ತೆರವುಗೊಳಿಸಿ

ತೀವ್ರ ಸಿಡಿಲಿನ ಸಾಧ್ಯತೆ ಇರುವುದರಿಂದ ಮನೆಯಲ್ಲಿರುವ ಟಿವಿ, ಫ್ರಿಡ್ಜ್, ಕಂಪ್ಯೂಟರ್ ಹಾಗೂ ಇತರ ಬೆಲೆಬಾಳುವ ಎಲೆಕ್ಟ್ರಾನಿಕ್ ಸಾಧನಗಳ ಪ್ಲಗ್‌ಗಳನ್ನು ತಕ್ಷಣವೇ ಅನ್‌ಪ್ಲಗ್ ಮಾಡುವುದು ಉತ್ತಮ

​ಅನಗತ್ಯವಾಗಿ ಹೊರಗೆ ಹೋಗಬೇಡಿ

ಬಲವಾದ ಗಾಳಿಗೆ ಮರಗಳು, ಕೊಂಬೆಗಳು ಅಥವಾ ವಿದ್ಯುತ್ ಕಂಬಗಳು ಇತರ ಅಪಾಯಗಳಿಂದ ತಪ್ಪಿಸಲು ಸಾರ್ವಜನಿಕರು ಹೊರಗೆ ತಿರುಗಾಡುವುದನ್ನು ತಪ್ಪಿಸಬೇಕು.

​ವಾಹನ ಚಾಲನೆ ನಿಯಂತ್ರಿಸಿ

ರಸ್ತೆಯಲ್ಲಿ ಜಾರುವಿಕೆ ಹೆಚ್ಚಾಗುವ ಮತ್ತು ಗೋಚರತೆ ಕಡಿಮೆಯಾಗುವ ಹಿನ್ನೆಲೆಯಲ್ಲಿ ಅನಗತ್ಯ ವಾಹನ ಚಾಲನೆಯನ್ನು ತಪ್ಪಿಸಬೇಕು.

ಸಮುದ್ರದಲ್ಲಿ ಅಲೆಗಳ ಭರಾಟೆ ಹೆಚ್ಚಿರಲಿದ್ದು, ಮೀನುಗಾರರು ಎಚ್ಚರಿಕೆಯಿಂದ ಇರುವಂತೆ ಎಚ್ಚರಿಸಲಾಗಿದೆ.

​ಹವಾಮಾನ ಇಲಾಖೆಯ ಈ ಪ್ರಮುಖ ಮಾಹಿತಿಯನ್ನು ಸಾರ್ವಜನಿಕರೆಲ್ಲರೂ ಗಂಭೀರವಾಗಿ ಪರಿಗಣಿಸಿ ಅಗತ್ಯ ಜಾಗರೂಕತೆ ಹಾಗೂ ಸುರಕ್ಷತಾ ಕ್ರಮಗಳನ್ನು ವಹಿಸುವಂತೆ ಕೋರಲಾಗಿದೆ.