ಮಹಿಳೆಯರ ಹಗ್ಗಜಗ್ಗಾಟ ಪಂದ್ಯಾವಳಿಯಲ್ಲಿ ಮೂಡುಬಿದಿರೆಯ ವಿಶ್ವ ತುಳುವೆರ್ ತಂಡ ಪ್ರಥಮ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದೆ.
ರಾಮಾಂಜನೇಯ ಜಿಮ್, ಮೂಡುಬಿದಿರೆ ವತಿಯಿಂದ ಆಯೋಜಿಸಲಾದ ರಾಮಾಂಜನೇಯ ಟ್ರೋಫಿ 2026 ಮಹಿಳೆಯರ ಹಗ್ಗಜಗ್ಗಾಟ ಪಂದ್ಯಾವಳಿಯಲ್ಲಿ ಒಟ್ಟು 14 ತಂಡಗಳು ಭಾಗವಹಿಸಿದ್ದವು.
ಪಂದ್ಯಾವಳಿಯಲ್ಲಿ ಮೂಡುಬಿದಿರೆಯ ವಿಶ್ವ ತುಳುವೆರ್ ತಂಡ ಪ್ರಥಮ ಸ್ಥಾನ ಗಳಿಸಿದರೆ, ಮಂಜೇಶ್ವರದ ಮಾಲಿಂಗೇಶ್ವರ ಕುಂಜತ್ತೂರು ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಬಜ್ಪೆಯ ಶ್ರೀ ದುರ್ಗಾ ಕೊಳಂಬೆ ತಂಡ ತೃತೀಯ ಸ್ಥಾನ ಹಾಗೂ ಉಡುಪಿಯ ಉಡುಪಿ ಫ್ರೆಂಡ್ಸ್ ತಂಡ ಚತುರ್ಥ ಸ್ಥಾನ ತನ್ನದಾಗಿಸಿಕೊಂಡಿತು.
ಪಂದ್ಯಾವಳಿಯಲ್ಲಿ ಭಾಗವಹಿಸಿದ ತಂಡಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಕ್ರೀಡಾಸ್ಫೂರ್ತಿ ಮೆರೆದವು.

