ಉಡುಪಿ: ಜೇಸಿಐ ಭಾರತ ವಲಯ 15 ಜೇಸಿಐ ವಿಟ್ಲ ಮತ್ತು ತುಂಬೆ ಎಲೈಟ್ ಇದರ ಆಶ್ರಯದಲ್ಲಿ ಮಂಗಳೂರಿನ ಅಡ್ಯರ್ ಗಾಡ೯ನ್ ನಲ್ಲಿ ನಡೆದ ವಲಯ ಸಮ್ಮೇಳನ ಆರ್ಯ ಕಾರ್ಯಕ್ರಮದಲ್ಲಿ ವಲಯದ ಪ್ರತಿಷ್ಠಿತ ಘಟಕಗಳಲ್ಲಿ
ಒಂದಾದ ಜೇಸಿಐ ಉಡುಪಿ ಸಿಟಿ ಘಟಕಕ್ಕೆ ಅತ್ಯುತ್ತಮ ಘಟಕ ಅಧ್ಯಕ್ಷೆ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿಯನ್ನು ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಅವರು ಘಟಕದ ಅಧ್ಯಕ್ಷೆ ಪಲ್ಲವಿ ಕೊಡಗು ಅವರಿಗೆ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಸಂದೀಪ್ ಕುಮಾರ್, ಬಾಸುಮ ಕೊಡಗು,
ಕಾವ್ಯವಾಣಿ ಕೊಡಗು, ಸೃಜನ್ ಸಮಿಯಾ ಹೆಗ್ಡೆ,ನಾಗರಾಜ್, ಉಷಾ ಸುವರ್ಣ, ಸ್ಮಿತಾ ಪಾಟೀಲ್, ಹರ್ಷಿತಾ, ಅನುಶ್ರೀ, ವಿನಾಯಕ, ಮಹೇಶ್ ಮುಂತಾದವರು ಉಪಸ್ಥಿತರಿದ್ದರು. ಅಲ್ಲದೆ ಘಟಕಕ್ಕೆ ಜೇಸಿ ಸಪ್ತಾಹ ವಿನ್ನರ್, ಇಂಡಿವಿಜುವಲ್ ಡೆವಲಪ್ಮೆಂಟ್ ರನ್ನರ್ ಅಲ್ಲದೆ ಹಲವಾರು ಮನ್ನಣೆ ಪುರಸ್ಕಾರಗಳು ಲಭಿಸಿವೆ.

