ಉದಾತ್ತ ಚಿಂತನೆ ಸ್ವೀಕರಿಸುವುದು ಭಾರತೀಯ ಸಂಸತಿ: ಕೃಷ್ಣಾಪುರ ಶ್ರೀ

0
12

ಉಡುಪಿ : ಅನುಭವ ಮತ್ತು ನಿರಂತರ ಅಧ್ಯಯನದಿಂದ ಹಲವು ಬಾರಿ ಜ್ಞಾನಕ್ಕೆ ಪರಿಷ್ಕಾರಗಳಾಗುತ್ತವೆ. ಆದರೆ ಕೆಲವು ಜ್ಞಾನಗಳಿಗೆ ಪರಿಷ್ಕಾರವೇ ಇರುವುದಿಲ್ಲ, ಅವು ಶಾಶ್ವತ ಸತ್ಯವಾಗಿರುತ್ತದೆ. ಇದನ್ನು ವಿಜ್ಞಾನ ಎಂದು ಹೇಳುತ್ತಾರೆ. ಭಾರತೀಯ ಋಷಿಗಳ ಅಂತರ್ದೃಷ್ಟಿಗೆ ಗೋಚರವಾದ ಜ್ಞಾನ ಶಾಶ್ವತ ಸತ್ಯವಾಗಿದ್ದು, ಇದಕ್ಕೆ ಜ್ಯೋತಿಷ ಶಾಸ್ತ್ರವೇ ನಿದರ್ಶನ. ಉದಾತ್ತ ವಿಚಾರಗಳನ್ನು ಎಲ್ಲೆಡೆಯಿಂದ ಸ್ವೀಕರಿಸುವುದು ಭಾರತೀಯ ಸಂಸತಿಯಾಗಿದೆ ಎಂದು ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಹೇಳಿದರು.

ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಿನೀ ಸಂಸತ ಕಾಲೇಜಿನಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಡೆದ ಜ್ಯೋರ್ತಿವಿಜ್ಞಾನಮ್​ ಸಮ್ಮೇಳನದ ಸಮಾರೋಪ ಕಾರ್ಯಕ್ರಮದಲ್ಲಿ ಅನುಗ್ರಹ ಸಂದೇಶ ನೀಡಿದರು.

ಪ್ರತ್ಯಕ್ಷಂ ಜ್ಯೌತಿಷಂ ಶಾಸ್ತ್ರಂ ಚಂದ್ರಾರ್ಕೌ ಯತ್ರ ಸಾಕ್ಷಿಣೌ ಎಂದು ಜ್ಯೋತಿಷ್ಯವು ಪ್ರತ್ಯಕ್ಷಸಿದ್ಧವಾದ ಶಾಸ್ತ್ರವಾದ್ದರಿಂದ ವಿಜ್ಞಾನವಾಗಿದೆ. ಜ್ಯೊತಿಷ್ಯ ಶಾಸ್ತ್ರಕ್ಕೂ ತುಳುನಾಡಿನ ವಿಶೇಷ ಕೊಡುಗೆ ಇದೆ. ಈ ತುಳುನಾಡಿನಲ್ಲಿ ಶ್ರೀಮಧ್ವಾಚಾರ್ಯರಿಗಿಂತ ಪೂರ್ವದಿಂದಲೂ ಸಿಂಹಮಾಸದಲ್ಲೇ ಕೃಷ್ಣಾಷ್ಟಮಿ ಆಚರಿಸುವ ಕ್ರಮ ರೂಢಿಯಲ್ಲಿತ್ತು. ಕಾರಣವೇನೆಂದರೆ ಅಷ್ಟಮಿ ತಿಥಿಗೆ ರೋಹಿಣೀ ಯೋಗ ಬರುವುದು ಸಿಂಹಮಾಸದಲ್ಲಿ ಮಾತ್ರ, ಬೇರೆ ಮಾಸಗಳಲ್ಲಿ ಬರುವುದಿಲ್ಲ ಎಂದು ಹೇಳಿದರು.

ಪಿಪಿಸಿ ನಿವೃತ್ತ ಪ್ರಾಂಶುಪಾಲ ಪ್ರೊ. ಎ.ಪಿ. ಭಟ್​ ಮಾತನಾಡಿ, ಪ್ರ್ರಾಚಿನ ಭಾರತೀಯರ ಜ್ಞಾನ ಅಗಾಧವಾಗಿತ್ತು. ಪಶ್ಚಿಮದ ಆಧುನಿಕ ವಿಜ್ಞಾನ ಬೆಳೆಯುವ ಅನೇಕ ವರ್ಷಗಳಿಗಿಂತ ಪೂರ್ವದಲ್ಲೇ ಭಾರತೀಯರಲ್ಲಿ ಖಗೋಳ ವಿಜ್ಞಾನ ವಿಸತವಾಗಿ ಬೆಳೆದಿತ್ತು. ಖಗೋಳವಿಜ್ಞಾನದಿಂದಲೇ ಗಣಿತವೂ ಬೆಳೆಯಿತು. ಪಾಶ್ಚಿಮಾತ್ಯ ವಿಜ್ಞಾನಿಗಳೂ ಭಾರತೀಯರ ಕೊಡುಗೆಗಳನ್ನು ಸ್ಮರಿಸಿಕೊಂಡಿದ್ದಾರೆ, ಇಂದಿನ ವಿದ್ಯಾರ್ಥಿಗಳು ಈ ಭಾರತೀಯ ವಿದ್ಯಾಪರಂಪರೆಯನ್ನು ಅನ್ವೇಷಿಸಿ ಉಳಿಸುವ ಪ್ರಯತ್ನವನ್ನು ಮಾಡಬೇಕು ಎಂದು ಹೇಳಿದರು.

ಮುಖ್ಯ ಅಥಿತಿಯಾಗಿ ವಿದ್ವಾನ್​ ಗೋಪಾಲಕೃಷ್ಣ ಜೋಯೀಸ್​, ಉದ್ಯಮಿ ಅಜಯ್​ ಶೆಟ್ಟಿ ಮಾತನಾಡಿದರು. ಸಂಸತ ಕಾಲೇಜಿನ ಪ್ರಾಂಶುಪಾಲ ಪ್ರೊ. ಅಮೃತೇಶ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ನಿಟ್ಟೆಯ ಭಾರತೀಯ ಜ್ಞಾನ ಪರಂಪರ ವಿಭಾಗದ ನಿರ್ದೇಶಕ ಪ್ರೊ. ಸುಧೀರ ರಾಜ್​ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮ್ಮೇಳನದ ಸಂಚಾಲಕ ಪ್ರೊ. ಡಿ. ಶಿವಪ್ರಸಾದ ತಂತ್ರೀ, ನಿಟ್ಟೆಯ ನುಕ್ಸರ್​ ಮುಖ್ಯಸ್ಥ ಪ್ರೊ. ಅನಿರ್ಬಾನ್​ ಚಕ್ರವರ್ತಿ ಮತ್ತು ಡಾ. ನಾಗೇಶ ಭಟ್​ ಕೆ.ಸಿ. ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅನಘಾ ಪ್ರಾರ್ಥಿಸಿದರು. ಜ್ಯೋತಿಷ್ಯಶಾಸ್ತ್ರ ಉಪನ್ಯಾಸಕ ಡಾ. ರಾಧಾಕೃಷ್ಣ ಸ್ವಾಗತಿಸಿದರು. ಪ್ರೊ. ಸತ್ಯನಾರಾಯಣ ಆಚಾರ್ಯ ವಂದಿಸಿದರು. ಡಾ. ಬಿ. ಗೋಪಾಲ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.