3D ಪ್ರಿಂಟಿಂಗ್ ತಂತ್ರಜ್ಞಾನದಲ್ಲಿ ಮರುಬಳಕೆ ಮಾಡಬಹುದಾದ INVISION ರಾಕೆಟ್ -೧ ಎಂಬ ರಾಕೆಟ್ ಪರಿಕಲ್ಪನಾ ಮೂಲ ಮಾದರಿ ನಿರ್ಮಿಸಿದ ಯುವ ಸಂಶೋಧಕ ದೀಪಕ್ ಎ.ಎಸ್.

0
8

ವಿಜ್ಞಾನ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಪ್ರಯತ್ನ ‘ಇನ್ವಿಷನ್ ರಾಕೆಟ್-1’ ಮಾದರಿ ಸಿದ್ಧ

ಮಂಗಳೂರು/ದಕ್ಷಿಣ ಕನ್ನಡ: ವಿಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ರಕ್ಷಣಾ ಸಂಶೋಧನಾ ಸ್ವದೇಶಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಆವಿಷ್ಕಾರಗಳಲ್ಲಿ ಆಸಕ್ತಿ ಹೊಂದಿರುವ ಭಾರತ ದೀಪ defence ಅಂಡ್ ಸ್ಪೇಸ್ R &D ಇಂಡಿಯಾ ಉಪಕ್ರಮದ ಸಂಸ್ಥಾಪಕ ಯುವ ಸಂಶೋಧಕ ದೀಪಕ್ ಎ.ಎಸ್. ಅವರು ತಮ್ಮ ‘INVISION ROCKET-1’ (ಇನ್ವಿಷನ್ ರಾಕೆಟ್-1) ಎಂಬ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ ಪರಿಕಲ್ಪನಾ ಮಾದರಿಯನ್ನು 3D ಪ್ರಿಂಟಿಂಗ್ ತಂತ್ರಜ್ಞಾನದ3 00 ಮಿ.ಮೀ. ಉದ್ದ ಮತ್ತು 20–25 ಮಿ.ಮೀ. ವ್ಯಾಸವನ್ನು ಹೊಂದಿರುವ ರಾಕೆಟ್ ಮಾದರಿ; ಇದನ್ನು PLA (ಪಾಲಿಲ್ಯಾಕ್ಟಿಕ್ ಆಸಿಡ್) ಬಳಸಿ, ಪ್ರಮಾಣಿತ FDM (ಫ್ಯೂಸ್ಡ್ ಡಿಪೋಸಿಷನ್ ಮಾಡೆಲಿಂಗ್) 3D ಮುದ್ರಣ ವಿಧಾನದ ಮೂಲಕ ತಯಾರಿಸಲಾಗಿದೆ. ಮೂಲಕ ನಿರ್ಮಿಸಿ ಪೂರ್ಣಗೊಳಿಸಿದ್ದಾರೆ.“INVISION ROCKET-1” ಗಾಗಿ ಭಾರತ ಸರ್ಕಾರದ ಕೃತಿಸ್ವಾಮ್ಯ ಕಚೇರಿಗೆ (Copyright Office) ಅಧಿಕೃತವಾಗಿ ಅರ್ಜಿಯನ್ನು ಸಲ್ಲಿಸಿದ್ದೀನೇ . INVISION (ಇನ್ವಿಷನ್) ಎಂಬುದು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಸನಾತನ ಜ್ಞಾನ ಮತ್ತು ನಾವೀನ್ಯತೆಯ ಮನೋಭಾವದಲ್ಲಿ ಬೇರೂರಿರುವ INVISION, ವಿಜ್ಞಾನ, ತಂತ್ರಜ್ಞಾನ ಹಾಗೂ ಸ್ವದೇಶಿ ಸಂಶೋಧನೆಯ ಮೂಲಕ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಯೋಜನೆಯ ಕುರಿತು ದೀಪಕ್ ಎ.ಎಸ್. ಅವರು ಪ್ರಸ್ತಾವನೆಯನ್ನು Young Indian Scientist Pvt. Ltd. ಸಂಸ್ಥೆಗೆ ಸಲ್ಲಿಸಿದರು . ಮತ್ತು ಅದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಪ್ರಸೋಭ್ ಚಂದ್ರನ್ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
2026ರ ಅಕ್ಟೋಬರ್ 28ರಂದು ಇಮೇಲ್ ಮೂಲಕ ಪ್ರತಿಕ್ರಿಯಿಸಿದ ಅವರು, ದೀಪಕ್ ಅವರ ಪ್ರಯತ್ನಗಳನ್ನು ಶ್ಲಾಘಿಸಿ, ಯೋಜನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಬೆಂಬಲ ನೀಡಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ. ಜೊತೆಗೆ, ಯೋಜನೆಯ ಕುರಿತು ಹೆಚ್ಚಿನ ಅಧ್ಯಯನ ನಡೆಸಿ, ಮುಂದಿನ ಪ್ರಗತಿಯ ಮಾಹಿತಿಯನ್ನು ಹಂಚಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಹಾಗು ‘INVISION ROCKET-1’ ಯೋಜನೆಯ ಪರಿಕಲ್ಪನೆಯನ್ನು ISROಯ ANTRIKSH NAVACHAR / Space Innovation ವೇದಿಕೆಯ ಮೂಲಕ ISRO STEM ಕಾರ್ಯಕ್ರಮಕ್ಕೆ ಸಲ್ಲಿಸಿದ್ದಾರೆ., ಯೋಜನೆಯನ್ನು ವಿಷಯ ತಜ್ಞರು (Subject Matter Experts) ಪರಿಶೀಲಿಸಲಿದ್ದಾರೆ ಎಂದು ತಿಳಿಸಲಾಗಿದೆ.

ಪ್ರಸ್ತುತ ಇನ್ವಿಷನ್ ರಾಕೆಟ್-1 ಒಂದು 3D-ಪ್ರಿಂಟ್ ಮಾಡಿದ ಪರಿಕಲ್ಪನಾ ಹಾಗೂ ಪ್ರದರ್ಶನ ಮಾದರಿಯಾಗಿದ್ದು, ಕಾರ್ಯನಿರ್ವಹಿಸುವ ಉಡಾವಣಾ ರಾಕೆಟ್ ಅಥವಾ ಪರೀಕ್ಷಿತ ಮರುಬಳಕೆ ವ್ಯವಸ್ಥೆಯಲ್ಲ ಭವಿಷ್ಯದಲ್ಲಿ ಈ ಪರಿಕಲ್ಪನೆಯನ್ನು ಸಂಶೋಧನೆ ಮತ್ತು ಎಂಜಿನಿಯರಿಂಗ್ ಅಭಿವೃದ್ಧಿಯ ಮೂಲಕ ಮುಂದುವರಿಸುವುದು ಅವರ ಗುರಿಯಾಗಿದೆ. ಯುವಜನರಲ್ಲಿ ವೈಜ್ಞಾನಿಕ ಚಿಂತನೆ, ಸೃಜನಶೀಲತೆ ಮತ್ತು ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿಯ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಈ ಪ್ರಯತ್ನ ಮಹತ್ವದ ಹೆಜ್ಜೆಯಾಗಲಿ ಎಂಬುದು ಅವರ ಆಶಯವಾಗಿದೆ.
‘INVISION ROCKET-1’ ರಾಕೆಟ್ ಮಾದರಿಯ ನಿರ್ಮಾಣಕ್ಕೆ ಶ್ರೀ ಉಮೇಶ್ ಮಲುವೇಲು ಅವರು ಪ್ರಾಯೋಜಕತ್ವದ ಬೆಂಬಲ ನೀಡಿದ್ದಾರೆ. ಯುವ ಸಂಶೋಧನೆ, ಸ್ವದೇಶಿ ಆವಿಷ್ಕಾರ ಹಾಗೂ ಬಾಹ್ಯಾಕಾಶ ತಂತ್ರಜ್ಞಾನದ ಅಭಿವೃದ್ಧಿಗೆ ಇಂತಹ ಪ್ರೋತ್ಸಾಹವು ಮಹತ್ವದ ಕೊಡುಗೆಯಾಗಿದೆ .
ಭಾರತದ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದ ಭವಿಷ್ಯದ ಸಾಧ್ಯತೆಗಳಿಂದ ಪ್ರೇರಿತರಾಗಿ ರೂಪಿಸಿರುವ ಈ ಮಾದರಿಯು ಮರುಬಳಕೆ ಮಾಡಬಹುದಾದ ರಾಕೆಟ್ ವ್ಯವಸ್ಥೆಯ ಕುರಿತ ಅವರ ಪರಿಕಲ್ಪನೆ ಮತ್ತು ತಾಂತ್ರಿಕ ಆಸಕ್ತಿಯನ್ನು ಪ್ರತಿಬಿಂಬಿಸುತ್ತದೆ. ಉಪಗ್ರಹಗಳು ಹಾಗೂ ವೈಜ್ಞಾನಿಕ ಉಪಕರಣಗಳನ್ನು ಬಾಹ್ಯಾಕಾಶಕ್ಕೆ ಸಾಗಿಸುವುದು, ಭವಿಷ್ಯದ ಬಾಹ್ಯಾಕಾಶ ಕಾರ್ಯಾಚರಣೆಗಳು ಮತ್ತು ರಾಕೆಟ್‌ನ ಮರುಬಳಕೆ ಸಾಮರ್ಥ್ಯದ ಕುರಿತು ಅರಿವು ಮೂಡಿಸುವುದು ಈ ಪರಿಕಲ್ಪನೆಯ ಪ್ರಮುಖ ಉದ್ದೇಶಗಳಾಗಿವೆ.

ಇಂದಿನ ಪರಿಕಲ್ಪನೆಯೇ ನಾಳೆಯ ತಂತ್ರಜ್ಞಾನಕ್ಕೆ ಆರಂಭವಾಗಬಹುದು. ಭಾರತದ ಯುವಜನರಲ್ಲಿ ವಿಜ್ಞಾನ, ಸಂಶೋಧನೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನದ ಬಗ್ಗೆ ಆಸಕ್ತಿ ಬೆಳೆಸುವುದರ ಜೊತೆಗೆ ಭಾರತ ಬಾಹ್ಯಾಕಾಶ ಕ್ಷೇತ್ರಕ್ಕೆ ಗಮನರ್ಹ ಕೊಡುಗೆ ನೀಡುವುದು ನನ್ನ ಉದ್ದೇಶ. ಈ ಮಾದರಿಯನ್ನು ಮುಂದಿನ ಹಂತಗಳಲ್ಲಿ ತಾಂತ್ರಿಕ ಅಧ್ಯಯನ, ತಜ್ಞರ ಮಾರ್ಗದರ್ಶನ ಮತ್ತು ಅಗತ್ಯ ಪರೀಕ್ಷೆಗಳ ಪ್ರಾಯೋಗಿಕ ಅಭಿವೃದ್ಧಿ ಮತ್ತು ವಾಸ್ತವಕ್ಕೆ ತರುವ ಮೂಲಕ ಅಭಿವೃದ್ಧಿಪಡಿಸುವ ಆಶಯವಿದೆ,” ಭಾರತದ ನೆಲದಿಂದ ‘INVISION ROCKET-1’ ಉಡಾವಣೆಗೊಂಡು, ಹೆಮ್ಮೆಯಿಂದ ಆಕಾಶಕ್ಕೆ ಚಿಮ್ಮಿ, ಉಪಗ್ರಹವೊಂದನ್ನು ಬಾಹ್ಯಾಕಾಶದ ಕಕ್ಷೆಗೆ ಸೇರಿಸಿ, ತದನಂತರ ಐತಿಹಾಸಿಕವಾಗಿ ಮರಳಿ ಭಾರತದ ನೆಲದ ಮೇಲೆಯೇ ಇಳಿಯುವ ದಿನಕ್ಕಾಗಿ ನಾನು ಹೆಮ್ಮೆಯಿಂದ ಕಾಯುತ್ತಿದ್ದೇನೆ. ಎಂದು ದೀಪಕ್ ಎ.ಎಸ್. ತಿಳಿಸಿದ್ದಾರೆ.