ಕಲಾಕುಂಚದಿಂದ “ಕುಂಚ ಕೈಪಿಡಿ” ಉಚಿತ ಲೇಖನಕ್ಕೆ ಆಹ್ವಾನ

0
29

ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಕಲಾಕುಂಚ ಗ್ಗೆ “ಕುಂಚ ಕೈಪಿಡಿ” ಉಚಿತ ಲೇಖನಕ್ಕೆ ಆಹ್ವಾನಿಸಲಾಗಿದೆ ಎಂದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷರಾದ ವಾಸುದೇವ ಎಲ್. ರಾಯ್ಕರ್ ತಿಳಿಸಿದ್ದಾರೆ.

ಕಲಕುಂಚ 36 ವರ್ಷಗಳಿಂದ ನಿರಂತರವಾಗಿ ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ, ಸಂಸ್ಕೃತಿ, ಯಕ್ಷಗಾನ ಸೇರಿದಂತೆ ನಿರಂತರವಾಗಿ ಕಠಿಣ ಪರಿಶ್ರಮದಿಂದ ನಡೆದು ಬಂದ ದಾರಿಯ ಬಗ್ಗೆ ಉಚಿತ ಲೇಖನ ಬರೆದು ಈ ಕೆಳಗಿನ ಕಲಾಕುಂಚ ವಿಳಾಸಕ್ಕೆ ಅಂಚೆ ಮೂಲಕ ಕಳಿಸಬೇಕಾಗಿ ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.

ಲೇಖನ ಬರೆದು ಲೇಖಕರು ತಮ್ಮ ಹೆಸರು ಮನೆಯ ಪೂರ್ಣ ವಿಳಾಸ ವ್ಯಾಟ್ಸಪ್ ಸಂಖ್ಯೆ ಹಾಕಿ ಕಳಿಸಬೇಕಾಗಿದೆ. ಕಲಾಕುಂಚ ಬಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಲೇಖನ ಬರೆಯಬೇಕಾಗಿ ಕಲಾಕುಂಚ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಿನಂತಿಸಿದ್ದಾರೆ. ಲೇಖನ ಬರೆದು ಕಳಿಸುವ ವಿಳಾಸ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ “ಕನ್ನಡ ಕೃಪಾ” ಕುವೆಂಪು ರಸ್ತೆ, ಕೆ.ಬಿ.ಬಡಾವಣೆ, (ಲಾಯರ್ ರೋಡ್), ದಾವಣಗೆರೆ-577002. ಮೊ.: 9538732777.