ಗೋಳ್ತಮಜಲು ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ

0
3


ಮಕ್ಕಳ ಶಾರೀರಿಕ ಬಲಾಡ್ಯತೆಗೆ ಕ್ರೀಡೆ ಸಹಕಾರಿ : ಪದ್ಮನಾಭ ಕೊಟ್ಟಾರಿ

ಕಲ್ಲಡ್ಕ : ಮಕ್ಕಳ ಶಾರೀರಿಕ ಬಲಾಡ್ಯತೆ, ಶಿಸ್ತು ಸಂಯಮ ಕ್ಕೆ ಕ್ರೀಡೆ ಸಹಕಾರಿ ಎಂದು ಮಾಜಿ ಶಾಸಕ ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ ಹೇಳಿದರು.ಅವರು ನವಂಬರ್ 5 ಗುರುವಾರ ಸರಕಾರಿ ಪ್ರೌಢಶಾಲೆ ಗೊಳ್ತಮಜಲು ಇಲ್ಲಿ 17 ರ ವಯೋಮಿತಿಯ ಬಾಲಕ ಬಾಲಕಿಯರ ಬಂಟ್ವಾಳ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಚಂದ್ರಶೇಖರ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಗೊಳ್ತಮಜಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನಿಲ್, ಉದ್ಯಮಿ ಆನಂದ ಆಳ್ವ, ಕಲ್ಲಡ್ಕ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷ ಗಣೇಶ್ ನೆಟ್ಲ, ಮಜಿ ಸರಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಬೆನಡಿಕ್ಟ ಮೆಂಡೋನ್ಸ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಂಕರ್ ವಿ, ಬಂಟ್ವಾಳ ತಾಲೂಕು ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷ ಶಿವಪ್ರಸಾದ್ ರೈ, ಜಿಲ್ಲಾ ಉಪಾಧ್ಯಕ್ಷ ನವೀನ್ ಪಿ ಎಸ್, ಬಂಟ್ವಾಳ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಮ್, ಗ್ರೇಡ್ 2 ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷ ಇಂದುಶೇಖರ್, ದೈಹಿಕ ಶಿಕ್ಷಣ ಶಿಕ್ಷಕ ಸಂಘದ ರಾಜ್ಯ ಪರಿಷತ್ ಸದಸ್ಯ ಚಿನ್ನಪ್ಪ,ಶಾಲಾ ನಿವೃತ್ತ ಶಿಕ್ಷಕ ನಾರಾಯಣಗೌಡ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರುಗಳಾದ ಮೋನಪ್ಪ ದೇವಸ್ಯ, ಬಾಲಕೃಷ್ಣ ಕೊಟ್ಟಾರಿ, ನಾಗೇಶ್ ಪೂಜಾರಿ, ಪದ್ಮನಾಭ ಗೌಡ, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಸುಜಾತ ಎಂ ಸ್ವಾಗತಿಸಿದರು. ಕಲ್ಲಡ್ಕ ವಲಯ ಕ್ರೀಡಾಕೂಟಗಳ ನೋಡಲ್ ಅಧಿಕಾರಿ ಜಗದೀಶ್ ಪ್ರಾಸ್ತಾವಿಕ ಮಾತನಾಡಿ, ಶಿಕ್ಷಕ ಶಂಕರ್ ವಿ ಪಾವಸ್ಕರ್ ವಂದಿಸಿದರು. ಶಿಕ್ಷಕಿ ಸುನಿತಾ ಬಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ್ ಟಿ ಹಾಗೂ ಶಿಕ್ಷಕರು ಸಹಕರಿಸಿದರು.