
ಸಾಹಿತ್ಯೋತ್ಸವ ಭಾವಗೀತೆಗಳ ಗಾಯನ- ಕವಿಗೋಷ್ಠಿ
ಅನ್ನಪೂರ್ಣ ಪ್ರಕಾಶನ, ಸಿರಿಗೇರಿ ,ಸಿರುಗುಪ್ಪ ತಾಲೂಕು ,ಬಳ್ಳಾರಿ ಜಿಲ್ಲೆ ಇದರ ನೇತೃತ್ವದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕಾಸರಗೋಡು ಇದರ ಸಹಯೋಗದಲ್ಲಿ ಜಿ.ಎಸ್ ಶಿವರುದ್ರಪ್ಪ ಜನ್ಮಶತಮಾನೋತ್ಸವ ಸಾಹಿತ್ಯೋತ್ಸವ, ಭಾವಗೀತೆಗಳ ಗಾಯನ- ಕವಿಗೋಷ್ಠಿಯು 2026 ನವಂಬರ್ 8 ಆದಿತ್ಯವಾರದಂದು ಬೆಳಿಗ್ಗೆ ಗಂಟೆ 10.00 ರಿಂದ 1.00 ರ ತನಕ ಹಮ್ಮಿಕೊಳ್ಳಲಾಗಿದೆ.
ಗಡಿನಾಡು ಕಾಸರಗೋಡಿನಲ್ಲಿ ಜಿ.ಎಸ್ ಶಿವರುದ್ರಪ್ಪ ಜನ್ಮಶತಮಾನೋತ್ಸವ ಸಮಾರಂಭವನ್ನು ಪತ್ರಕರ್ತ ಮಹಾನುಬಾವಿ ಮಠ ಉದ್ಘಾಟಿಸಲಿದ್ದಾರೆ. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಉಪನ್ಯಾಸಕಿ ಪವಿತ್ರಾ ಕಾಮತ್ ಮಂಗಳೂರು, ರಾಧಾಕೃಷ್ಣ ಕೆ . ಉಳಿಯತ್ತಡ್ಕ, ಕಾಸರಗೋಡು ನಗರಸಭಾ ಕೌನ್ಸಿಲರ್ ಶಾರದಾ ಬಿ., ಸವಿ ಹೃದಯದ ಕವಿ ಮಿತ್ರರು ವೇದಿಕೆಯ ಸುಭಾಷ್ ಪೆರ್ಲ , ವೆಂಕಟ್ ಭಟ್ ಎಡನೀರು,ಜಯಾನಂದ ಕುಮಾರ್ ಕಾಸರಗೋಡು, ಕೆ.ಎನ್ ವೆಂಕಟ್ರಮಣ ಹೊಳ್ಳ , ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ಕೆ.ಗುರುಪ್ರಸಾದ್ ಕೋಟೆಕಣಿ, ಮಾಜಿ ಕೌನ್ಸಿಲರ್ ಶಂಕರ್ ಕೆ.,ಜೆ. ಪಿ. ನಗರ,ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಕೆ.ಜಗದೀಶ ಕೂಡ್ಲು ವಿಶೇಷ ಆಹ್ವಾನಿತರಾಗಿ ಭಾಗವಹಿಸುತ್ತಾರೆ.
ಕರ್ನಾಟಕದ ಪತ್ರಕರ್ತರಾದ ವೀರಣ್ಣ ಬಳಿಗಾರ ಬೆಂಗಳೂರು, ಶಿವರಾಜ್ ಬೆಂಗಳೂರು, ಪ್ರಸನ್ನ ಕುಮಾರ್ ಬೆಂಗಳೂರು ಗೋವರ್ಧನ ರೆಡ್ಡಿ ಬಳ್ಳಾರಿ, ಕಳಕಪ್ಪ ಬಂಡಿ ಕೊಪ್ಪಳ ,ಲೇಖಕ ಪ್ರಕಾಶಕ ಸಿರಿಗೇರಿ ಯರಿಸ್ವಾಮಿ ಬಳ್ಳಾರಿ ಉಪಸ್ಥಿತರಿರುತ್ತಾರೆ.
ಜಿ.ಎಸ್. ಶಿವರುದ್ರಪ್ಪ ಜನ್ಮಶತಮಾನೋತ್ಸವ ಭಾವಗೀತಾ ಗಾಯನ ಸಂಭ್ರಮದಲ್ಲಿ ವಸಂತ ಬಾರಡ್ಕ,ದಿವಾಕರ ಪಿ, ಕಾಸರಗೋಡು ಕಾವ್ಯ ಕುಶಲಕುಮಾರ ಕನ್ನಡ ಗ್ರಾಮ, ಗ್ರೀಷ್ಮ ಜಯರಾಮ ಕನ್ನಡ ಗ್ರಾಮ, ಅಶ್ವಿನಿ ಗುರುಪ್ರಸಾದ ,ಶ್ರೀಕಾಂತ ಕಾಸರಗೋಡು ಹಾಗೂ ಜಿ.ಪಿ ಮಣಿಯoಪಾರೆ ಪವಿತ್ರ ಜೆ.ಪಿ ಮಣಿಯಂಪಾರೆ, ಶ್ರೀ ದುರ್ಗಾ ಮೆಲೋಡಿಸ್ ಮಣಿಯಂಪಾರೆ ಮತ್ತು ಗುರುರಾಜ್ ಕಾಸರಗೋಡು ಸ್ವರಗಾನ ಸಂಗೀತ ಬಳಗ, ಕಾಸರಗೋಡು ತಂಡದವರು ಪಾಲ್ಗೊಳ್ಳಲಿದ್ದಾರೆ .
ಜಿ. ಎಸ್. ಶಿವರುದ್ರಪ್ಪ ಜನ್ಮಶತಮಾನೋತ್ಸವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಮಂಜಣ್ಣ ಸಿರಿಗೇರಿ ವಹಿಸಲ್ಲಿದ್ದಾರೆ.ಕವಿಗಳಾದ ದೇವರಾಜ್ ಆಚಾರ್ಯ ಸೂರoಬೈಲು , ಕು.ದೀಕ್ಷಾ ಪಾಂಡಿಗಾಯ, ಕು. ಗ್ರೀಷ್ಮ ಬಳ್ಳ ,ಪ್ರಮೀಳಾ ಚುಳ್ಳಿಕಾನ, ಸುಶೀಲಾ ಪದ್ಯಾಣ ,ಜೋಷ್ನಾ ಕಡೆಂದೇಲು, ಸುಮನ ಕರಿಂಬಿಲ, ಕು. ಅವನಿ, ವಿಜಯಕಾನ, ತೇಜಸ್ವಿನಿ ಮನೀಶ್ ಪುಚ್ಚೆಕಾಡು, ಸುಂದರ ಭಟ್ಟ ಕಾನ, ಶಶಿಕಲಾ ಟೀಚರ್ ಕುಂಬಳೆ, ಬಾಲಕೃಷ್ಣ ನಾಯ್ಕ, ಎಳ್ಕಾನ ,ನಿರ್ಮಲಾ ಸೇಸಪ್ಪ ಖಂಡಿಗೆ, ಸುಮಿತ್ರ ಎರ್ಪಕಟ್ಟೆ, ಚಿತ್ರಕಲಾ ದೇವರಾಜ್ ಸೂರಂಬೈಲು, ಮಾ. ದರ್ಶೀನ್ ಚಿರಾಲ್ ಡಿ. ಆಚಾರ್ಯ ,ಕು ನೀತಿಕಾ ಚೌಕಿ, ಮಲ್ಲಿಕಾ ರೆಂಜತಮೂಲೆ, ನಿವೇದಿತ ವಳಮಲೆ ಬದಿಯಡ್ಕ, ಮಾ. ಕೃಪೇಶ್ ಕಲ್ಲಕಟ್ಟ, ರಾಧಾಕೃಷ್ಣ ಕುರುಮುಜ್ಜಿ ಶ್ರುತಿ ಮೀಪುಗುರಿ ಅವರು ಕವಿತಾ ವಾಚನ ಗೈಯಲಿದ್ದಾರೆ.
ಕಾಸರಗೋಡು ಕನ್ನಡ ಗ್ರಾಮದಲ್ಲಿ 2026 ನವಂಬರ್ 28 ಮತ್ತು 29ರಂದು ನಡೆಯುವ ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ 2026, ಕೇರಳ- ಕರ್ನಾಟಕ ಉತ್ಸವ, ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವದಲ್ಲಿ ಅತ್ಯುತ್ತಮ ಕವನ ವಾಚನ ಮಾಡಿದವರಿಗೆ ರಾಜ್ಯಮಟ್ಟದ ಕವಿಗೋಷ್ಠಿ ರಾಜ್ಯ ಮಟ್ಟದ ಮಕ್ಕಳ ಕವಿಗೋಷ್ಠಿಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು ಎಂದು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ತಿಳಿಸಿದ್ದಾರೆ.
