ಪಾಂಚಜನ್ಯ: ಅಮೃತ ಮಹೋತ್ಸವ ಸಡಗರದಲ್ಲಿ ಪೆರಾಡಿ ಸಹಕಾರಿ ಸಂಘ

0
8

ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು “ಪಾಂಚಜನ್ಯ” 75ನೇ ವರ್ಷದ ಅಮೃತ ಮಹೋತ್ಸವ ಸಡಗರವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ‘ಸಂಗಮ’ಸಭಾ ಭವನ ಮತ್ತು ಗೋದಾಮು ಕಟ್ಟಡವನ್ನು ಉದ್ಘಾಟಿಸುತ್ತಿದೆ. ಇದೇ ಸಂದರ್ಭದಲ್ಲಿ ಅಖಿಲ ಭಾರತ ಸಹಕಾರ ಸಪ್ತಾಹ 2026 ಕೂಡಾ ಬೆಳ್ತಂಗಡಿ ತಾಲೂಕು ಪೆರಾಡಿ ಸಹಕಾರ ಸಂಘದ ಪ್ರಧಾನ ಕಛೇರಿ ಆವರಣದಲ್ಲಿ ನಡೆಯುತ್ತಿದೆ.

1952ನೇ ಇಸ್ವಿಯಲ್ಲಿ ಸ್ಥಾಪನೆಯಾದ ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಈಗಿನ ಅಧ್ಯಕ್ಷರಾಗಿ ಸಹಕಾರ ರತ್ನ ಸತೀಶ್ ಕಾಶಿಪಟ್ಣ,, ಉಪಾಧ್ಯಕ್ಷರಾಗಿ ಶ್ರೀಪತಿ ಉಪಾಧ್ಯಾಯ ಹಾಗೂ ಹನ್ನೊಂದು ಮಂದಿ ಆಡಳಿತ ಸದಸ್ಯರು ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

1976- 77 ರಲ್ಲಿ ಪೆರಿಂಜೆ ಸೇವಾ ಸಹಕಾರಿ ಸಂಘ ವಿಲೀನಗೊಂಡು ಪೆರಾಡಿ ವ್ಯವಸಾಯ ಸೇವಾ ಸಹಕಾರಿ ಸಂಘ ಎಂದು ನೋಂದಾಯಿಸಲ್ಪಟ್ಟು ಪೆರಿಂಜೆಯಲ್ಲಿ ಶಾಖೆಯಾಯಿತು. ಇದರ ವ್ಯವಹಾರ ಕ್ಷೇತ್ರ ಪೆರಾಡಿ, ಮರೋಡಿ, ಕಾಶಿ ಪಟ್ಣ, ಹೊಸಂಗಡಿ, ಬಡಕೋಡಿ ಗ್ರಾಮಗಳಿಗೆ ವಿಸ್ತರಿಸಲ್ಪಟ್ಟಿತು. 2003-4ನೇ ಮಹಾಸಭೆಯಲ್ಲಿ ನಿರ್ಣಯಿಸಿದಂತೆ 2005ರಲ್ಲಿ ಪಾಂಚಜನ್ಯ ಎಂಬ ನೂತನ ಕಟ್ಟಡ ಲೋಕಾರ್ಪಣೆಗೊಂಡಿತು.

1997-98 ರವರೆಗೆ ನಷ್ಟದಲ್ಲಿದ್ದ ಸಂಘ ತರುವಾಯ ಲಾಭದ ಹಾದಿಯಲ್ಲಿ ನಡೆಯಿತು. ಪ್ರಸ್ತುತ ಸಂಘದಲ್ಲಿ 3273 ಎ ದರ್ಜೆ ಸದಸ್ಯರು, 2.07 ಕೋಟಿ ಪಾಲು ಬಂಡವಾಳ, 56.79 ಕೋಟಿ ಠೇವಣಿ, 80.80 ಸಾಲ ಬಾಕಿ ಇದೆ. 2.49 ಕೋಟಿ ಕ್ಷೇಮನಿಧಿಯಲ್ಲಿ, 91 ಪಾಯಿಂಟ್ 91.46 ಕೋಟಿ ದುಡಿಯುವ ಬಂಡವಾಳ ಹೊಂದಿರುತ್ತದೆ. ಪ್ರಸ್ತುತ ವ್ಯವಹಾರ ಸಂಪೂರ್ಣ ಗಣಕಯಂತ್ರದ ಮೂಲಕ ನಡೆಯುತ್ತಿದೆ. ಕಾರ್ಯ ವ್ಯಾಪ್ತಿಯ ರೈತ ಸದಸ್ಯರಿಗೆ ಕೃಷಿ ಉದ್ದೇಶಕ್ಕೆ ಶೂನ್ಯ ಬಡ್ಡಿ ಅಲ್ಪಾವಧಿ ಸಾಲ, ಶೇಕಡ 3 ಬಡ್ಡಿಯ ಮಧ್ಯಮಾವಧಿ, ದೀರ್ಘಾವಧಿ, ಹಾಗೂ ಎಲ್ಲಾ ರೀತಿಯ ಸಾಲಗಳನ್ನು ನೀಡಲಾಗುತ್ತಿದೆ. ನವೋದಯ ಸ್ವಸಹಾಯ ಸಂಘಗಳಿಗೂ ಸಾಲ ನೀಡಲಾಗುತ್ತಿದ್ದು, ಪಡಿತರ ಸಾಮಗ್ರಿ ವಿತರಣೆ, ಅಡುಗೆ ಅನಿಲ ಪೂರೈಕೆ, ಸಾಮಾನ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ. ಶೇಕಡ 90 ಕ್ಕಿಂತ ಹೆಚ್ಚು ಸಾಲವನ್ನು ಸದಸ್ಯರು ಮರುಪಾವತಿ ಮಾಡಿರುತ್ತಾರೆ.
ಒಟ್ಟು 292 ನವೋದಯ ಸ್ವಸಹಾಯ ಸಂಘಗಳು ಖಾತೆಯನ್ನು ಹೊಂದಿದ್ದು ಮಹಿಳೆಯರೇ ಮುನ್ನಡೆಸುತ್ತಿದ್ದಾರೆ.

ಸರಕಾರದ ಯಶಸ್ವಿನಿ ರೈತ ಆರೋಗ್ಯ ವಿಮಾ ಯೋಜನೆಯಲ್ಲಿ ಸದಸ್ಯರನ್ನು ನೋಂದಾಯಿಸಲಾಗಿದೆ. ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯ ಪ್ರಯೋಜನವು ಸದಸ್ಯರಿಗೆ ದೊರಕಿದೆ. ಗರಿಷ್ಠ ಭದ್ರತೆಯ ಸಿಸಿ ಕ್ಯಾಮೆರಾ ದೊಂದಿಗೆ ಲಾಕರ್ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಬಹಳಷ್ಟು ವರ್ಷಗಳಿಂದ ಲೆಕ್ಕಪರಿಶೋಧನೆಯಲ್ಲಿ ‘ಎ’ ವರ್ಗದ ಮಾನ್ಯತೆ, ಸದಸ್ಯರಿಗೆ ಶೇಕಡ 22 ಡಿವಿಡೆಂಡ್, ನಿರಂತರ 12 ವರ್ಷಗಳಿಂದ ದ ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ಉತ್ತಮ ಸಹಕಾರಿ ಸಂಘ ಎಂಬ ವಿಶೇಷ ಪ್ರೋತ್ಸಾಹಕ ಪ್ರಶಸ್ತಿ, ಸದಸ್ಯರ ಸಾಧಕ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ, ಪ್ರತಿಭಾ ಪುರಸ್ಕಾರ, ಉತ್ತಮ ಕೃಷಿ ಪ್ರಶಸ್ತಿ, ವಿಕಲಚೇತನರಿಗೆ ಸಹಾಯಧನ, ಮೃತಪಟ್ಟ ಸದಸ್ಯರ ವಾರಸುದಾರರಿಗೆ ಸಹಾಯಧನವನ್ನು ನೀಡಲಾಗುತ್ತಿದೆ.

ಪ್ರಸ್ತುತ ನಿರ್ದೇಶಕರುಗಳಾಗಿ ಎನ್ ಆರ್ ಸೀತಾರಾಮ ರೈ, ಪ್ರವೀಣ್ ಗಿಲ್ಬರ್ಟ್ ಪಿಂಟೋ, ದೇವಕಿ ಡಿ ಶೆಟ್ಟಿ, ಸುಜಾತ, ಕೃಷ್ಣಪ್ಪ, ರಾಜೇಶ್ ಏನ್ ಶೆಟ್ಟಿ, ಸುರೇಶ್ ಅಂಚನ್, ಅಕ್ಷಯ ಕುಮಾರ್, ವಿಜಯ ನಾಯ್ಕ್, ವಲಯ ಮೇಲ್ವಿಚಾರಕರಾಗಿ ಸುದರ್ಶನ್ ಕೋಟ್ಯಾನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಹೇಮಾ, ಸಿಬ್ಬಂದಿಗಳಾಗಿ ರೋಹಿಣಿ, ವೀರೇಂದ್ರ ಕುಮಾರ, ಕವಿತಾ, ಅಕ್ಷತಾ, ನಾಗೇಶ್ ಪೂಜಾರಿ, ರಮ್ಯಾ, ನಂದೀಶ್, ಅಖಿಲೇಶ್, ಗಿರೀಶ್ ಹಾಗೂ ಸತೀಶ್ ಕಾರ್ಯನಿರ್ವಹಿಸುತ್ತಿದ್ದಾರೆ.