ಅನ್ನಪಾಡಿ ಶ್ರೀ ಬಾಲ ಗಣಪತಿ ದೇವಸ್ಥಾನದಲ್ಲಿ ರಂಗಪೂಜೆ, ಅನ್ನದಾನ ಸೇವೆ

0
23

ಸಜೀಪಮೂಡ: ಅನ್ನಪಾಡಿ ಶ್ರೀ ಬಾಲ ಗಣಪತಿ ದೇವಸ್ಥಾನದ ಶ್ರೀ ಕ್ಷೇತ್ರದಲ್ಲಿ ರಂಗಪೂಜಾ ಸೇವೆಯು ಅನ್ನದಾನದೊಂದಿಗೆ ಭಕ್ತಿಭಾವದಿಂದ ಜರುಗಿತು.

ಸಜೀಪ ಮಾಣಗಣೆ ಕ್ಷೇತ್ರದ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಬಳಿಕ ಭಕ್ತಾದಿಗಳಿಗೆ ಅನ್ನದಾನ ಸೇವೆ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಶ್ರೀನಿವಾಸ ಶಿವ ತಾಯ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ದೇರಾಜೆಗುತ್ತು, ಸದಸ್ಯರಾದ ಲಿಂಗಪ್ಪ ದೋಟ, ರಮೇಶ್ ಅನ್ನಪಾಡಿ, ಹೇಮಂತ್, ಪ್ರಬಂಧಕ ಪ್ರಶಾಂತ್ ಕುಮಾರ್, ಜಯಪ್ರಕಾಶ್ ಪೆರ್ವ, ಕುಶಾಲಾಕ್ಷ ಮೊದಲಾದವರು ಉಪಸ್ಥಿತರಿದ್ದರು