ಮಂಜಲ್‌ಪಾದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಲಕ್ಷದೀಪೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

0
11

ಸಜೀಪ : ಮಂಜಲ್‌ಪಾದೆ ಸಜೀಪಮುನೂರು ಶ್ರೀ ಕ್ಷೇತ್ರದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರತಿವರ್ಷ ನಡೆಯುವ ಲಕ್ಷದೀಪೋತ್ಸವ ಹಾಗೂ ಪ್ರತಿಷ್ಠಾಪನಾ ದಿನಾಚರಣೆಯ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಹಾಳಾದ್ರಿ ಸಾನಿಧ್ಯ ಬಿಲ್ಲಂ ಪದವು ಸಜೀಪ ಮಾಣಗಣೆ ಕ್ಷೇತ್ರದಲ್ಲಿ ನಡೆದ ಕಾರ್ತಿಕ ದೀಪೋತ್ಸವದ ಸಂದರ್ಭದಲ್ಲಿ ಸಜೀಪ ಮಾಣಗಣೆ ಕ್ಷೇತ್ರದ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ವೇದಮೂರ್ತಿ ಶಿವರಾಮ ಮೈಯ್ಯ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಂಜಲ್‌ಪಾದೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೃಷ್ಣ ಶಾಮ್, ಎಂ. ಬಿಜಂದಾರು ಗುತ್ತು ಶಿವರಾಮ ಭಂಡಾರಿ, ಸಜೀಪ ಗುತ್ತುಗಡಿ ಪ್ರಧಾನರಾದ ಮುತ್ತಣ್ಣ ಶೆಟ್ಟಿ ಯಾನೆ ಕಾಳ ಶೆಟ್ಟಿ, ಮಾಡದಾರ್ ಗುತ್ತು ಯಶೋಧರ ರೈ, ಕಿಶನ್ ಸೇಣವ, ಸುಧಾಕರ ಕೆ.ಟಿ., ಗೀತೇಶ್ ಗಟ್ಟಿ, ಪುರಂದರ, ಯಶವಂತ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.