36ನೇ ವಾರ್ಷಿಕ ಮಹಾಸಭೆಯಲ್ಲಿ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ; ವಿವಿಧ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ನಿರ್ಧಾರ
ಕಾಸರಗೋಡು: ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕಾಸರಗೋಡು ಇದರ 2026-27ನೇ ಸಾಲಿನ ಅಧ್ಯಕ್ಷರಾಗಿ ಸಂಸ್ಥಾಪಕ ಅಧ್ಯಕ್ಷ ಶಿವರಾಮ ಕಾಸರಗೋಡು ಅವರು ಪುನರಾಯ್ಕೆಯಾಗಿದ್ದಾರೆ.

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ 36ನೇ ವಾರ್ಷಿಕ ಮಹಾಸಭೆಯು ಅಕ್ಟೋಬರ್ 25ರಂದು ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆಯಿತು. ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಸಭೆಯ ಅಧ್ಯಕ್ಷತೆ ವಹಿಸಿದ್ದರು. 2025-26ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಪ್ರಧಾನ ಕಾರ್ಯದರ್ಶಿ ಕೆ. ಜಗದೀಶ್ ಕೂಡ್ಲು ಮಂಡಿಸಿ ಅನುಮೋದನೆ ಪಡೆದರು. 2026-27ನೇ ಸಾಲಿನ ಯೋಜನೆಗಳ ಅನುಷ್ಠಾನಕ್ಕಾಗಿ 25 ಲಕ್ಷ ರೂ. ಮೊತ್ತವನ್ನು ಮುಂಗಡವಾಗಿ ಕಾಯ್ದಿರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಕಾಸರಗೋಡು ಗೋ-ಕುಟೀರವನ್ನು ನವೆಂಬರ್ 28ರಂದು ಉದ್ಘಾಟಿಸಲು ತೀರ್ಮಾನಿಸಲಾಯಿತು. ಇದೇ ದಿನ ಹಾಗೂ ನವೆಂಬರ್ 29ರಂದು ಎರಡು ದಿನಗಳ ಕಾಲ ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ-2026, ಕೇರಳ-ಕರ್ನಾಟಕ ಉತ್ಸವ ಹಾಗೂ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸಲು ಸಭೆ ನಿರ್ಧರಿಸಿತು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ವತಿಯಿಂದ ನಡೆಯಲಿರುವ ಕೇರಳ ರಾಜ್ಯ ದ್ವಿತೀಯ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಸಹಯೋಗ ನೀಡಲು ತೀರ್ಮಾನಿಸಲಾಯಿತು. ಕೇರಳ ರಾಜ್ಯ ದಾಸ ಸಾಹಿತ್ಯ ಪರಿಷತ್ತಿನ ಕೇರಳ ರಾಜ್ಯ ತೃತೀಯ ದಾಸ ಸಾಹಿತ್ಯ ಸಮ್ಮೇಳನ ಹಾಗೂ ಕೇರಳ ರಾಜ್ಯ ಭಜನಾ ಸಂಘಟನೆಗಳ ಸಮಾವೇಶಕ್ಕೂ ಸಹಕಾರ ನೀಡಲು ನಿರ್ಧರಿಸಲಾಯಿತು.
ಇದಲ್ಲದೆ, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ 8ನೇ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ ಹಾಗೂ ಕಾಸರಗೋಡು ಜಿಲ್ಲಾ (ದಕ್ಷಿಣ ಕನ್ನಡ ಜಿಲ್ಲಾ) ಫ್ರೀಲಾನ್ಸ್ ಪತ್ರಕರ್ತರ ಸಂಘದ 42ನೇ ಸಂಸ್ಥಾಪನಾ ವರ್ಷಾಚರಣೆ ಕಾರ್ಯಕ್ರಮಕ್ಕೆ ಸಹಯೋಗ ನೀಡಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿವಿಧ ಅಕಾಡೆಮಿಗಳು ಮತ್ತು ಪ್ರಾಧಿಕಾರಗಳ ಸಹಯೋಗದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ಐದು ದಿನಗಳ ಕಾಲ ಅಂತರರಾಜ್ಯ ಮಟ್ಟದ ಬಹುಭಾಷಾ ಸಾಹಿತ್ಯೋತ್ಸವ, ಯಕ್ಷಗಾನೋತ್ಸವ, ನಾಟಕೋತ್ಸವ, ಸಂಗೀತೋತ್ಸವ ಹಾಗೂ ನೃತ್ಯೋತ್ಸವಗಳನ್ನು ಆಯೋಜಿಸಲು ನಿರ್ಧರಿಸಲಾಯಿತು.
2026-27ನೇ ಸಾಲಿನ ನೂತನ ಪದಾಧಿಕಾರಿಗಳು
- ಅಧ್ಯಕ್ಷರು: ಶಿವರಾಮ ಕಾಸರಗೋಡು
- ಉಪಾಧ್ಯಕ್ಷರು: ರಾಧಾಕೃಷ್ಣ ಕೆ. ಉಳಿಯತ್ತಡ್ಕ
- ಪ್ರಧಾನ ಕಾರ್ಯದರ್ಶಿ: ಕೆ. ಜಗದೀಶ್ ಕೂಡ್ಲು
- ಜೊತೆ ಕಾರ್ಯದರ್ಶಿ: ಕಾವ್ಯ ಕುಶಲ
- ಕೋಶಾಧಿಕಾರಿ: ರಾಧಾ ಕೆ., ಕಾಸರಗೋಡು
ಕಾರ್ಯಕಾರಿ ಸಮಿತಿ ಸದಸ್ಯರು: ಎಸ್.ಎಲ್. ಭಾರದ್ವಾಜ್ ಬೇಕಲ್, ಕೆ. ಗುರುಪ್ರಸಾದ್ ಕೋಟೆಕಣಿ, ಕುಶಲಕುಮಾರ್ ಕೆ., ಶ್ರೀಕಾಂತ್ ಕಾಸರಗೋಡು, ಕಿಶೋರ್ ಕುಮಾರ್ ಕೆ., ದಿವಾಕರ ಪಿ. ಅಶೋಕನಗರ, ಬಿ. ಸತೀಶ್ ಕೂಡ್ಲು, ಎನ್. ಯೋಗೀಶ್ ಕೋಟೆಕಣಿ, ಶ್ರೀಕೃಷ್ಣ ಮಾಯ್ಲೆಂಗಿ ಹಾಗೂ ಕೆ. ನಿರಂಜನ ಕಾಸರಗೋಡು ಮೊದಲಾದವರು ಆಯ್ಕೆಯಾಗಿದ್ದಾರೆ.
ಗೌರವ ಸಲಹೆಗಾರರು: ಶಾರದಾ ಬಿ. (ಕೌನ್ಸಿಲರ್, ಕಾಸರಗೋಡು ನಗರಸಭೆ), ಜಯಾನಂದ ಕುಮಾರ್ ಕಾಸರಗೋಡು, ಕೆ.ಎನ್. ವೆಂಕಟ್ರಮಣ ಹೊಳ್ಳ ಕಾಸರಗೋಡು, ರಾಮಕೃಷ್ಣ ಮಯ್ಯ ಸಿರಿಬಾಗಿಲು, ಮಾಜಿ ಕೌನ್ಸಿಲರ್ ಶಂಕರ್ ಕೆ., ಕೆ. ವರಪ್ರಸಾದ್ ಕೋಟೆಕಣಿ, ಕೆ.ವಿ. ರಮೇಶ್ ಕಾಸರಗೋಡು, ಲವ ಕೆ. ಮೀಪುಗುರಿ, ಗಣೇಶ್ ನಾಯ್ಕ್ ಕೆ., ಪುರುಷೋತ್ತಮ ಎಂ. ನಾಯ್ಕ್, ಅಶ್ವಿನಿ ಗುರುಪ್ರಸಾದ್, ಶ್ವೇತಾ ಯೋಗೀಶ್, ಜಯಶ್ರೀ ದಿವಾಕರ, ಶಿಲ್ಪಾ ವರಪ್ರಸಾದ್ ಹಾಗೂ ಪ್ರದೀಪ್ ಬೇಕಲ್ ಅವರನ್ನು ಆಯ್ಕೆ ಮಾಡಲಾಯಿತು.
ಆಂತರಿಕ ಲೆಕ್ಕ ಪರಿಶೋಧಕರಾಗಿ ಎನ್. ಸಂದೇಶ್ ಕೋಟೆಕಣಿ ಅವರನ್ನು ನೇಮಕ ಮಾಡಲಾಯಿತು.

