ಅನುದಾನದಲ್ಲಿ ನಿರ್ಮಿಸಿದ ನೂತನ ಎರಡು ಕೊಠಡಿಗಳು ಮತ್ತು ಶೌಚಾಲಯಗಳ ಉದ್ಘಾಟನಾ ಕಾರ್ಯಕ್ರಮ

0
12

ದ ಕ ಜಿ ಪಂ ಉ ಹಿ ಪ್ರಾ ಶಾಲೆ ಮಂಕುಡೆಗೆ ಎಂ ಆರ್ ಪಿ ಎಲ್, ಅನುದಾನದಲ್ಲಿ ನಿರ್ಮಿಸಿದ ನೂತನ ಎರಡು ಕೊಠಡಿಗಳು ಮತ್ತು ಶೌಚಾಲಯಗಳ ಉದ್ಘಾಟನಾ ಕಾರ್ಯಕ್ರಮ

ಮೂಲಭೂತ ಸೌಕರ್ಯವನ್ನು ಒದಗಿಸಲಾಗಿದೆ, ಸರಕಾರಿ ಶಾಲೆಯನ್ನು ಉಳಿಸುವುದು ಊರಿನವರ ಜವಾಬ್ದಾರಿ… ಬ್ರಿಜೇಶ್ ಚೌಟ

ವಿಟ್ಲ :. ಗ್ರಾಮೀಣ ಪ್ರದೇಶದ ಶಾಲೆಗೆ ಮೂಲಭೂತ ಸೌಕರ್ಯವನ್ನು ಒದಗಿಸಲಾಗಿದೆ, ಸರಕಾರಿ ಶಾಲೆಯನ್ನು ಉಳಿಸುವುದು ಊರಿನವರ ಜವಾಬ್ದಾರಿ.ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದರು. ಅವರು ನವೆಂಬರ್ 9 ಸೋಮವಾರ ದ ಕ ಜಿ ಪಂ ಉ ಹಿ ಪ್ರಾ ಶಾಲೆ ಮಂಕುಡೆಗೆ ಇಲ್ಲಿ ಎಂ ಆರ್ ಪಿ ಎಲ್,ನ ಸಿ ಎಸ್ ಆರ್ ಅನುದಾನದಲ್ಲಿ ನಿರ್ಮಿಸಿದ ನೂತನ ಎರಡು ಕೊಠಡಿಗಳು ಮತ್ತು ಶೌಚಾಲಯ ಉದ್ಘಾಟಿಸಿ ಮಾತನಾಡಿದರು.

ಸಮುದಾಯದ ಸಹಕಾರದಿಂದ ಸರಕಾರಿ ಶಾಲೆ ಬೆಳೆಯುತ್ತದೆ, ಹಾಗಾಗಿ ಎಲ್ಲರೂ ಕೈ ಜೋಡಿಸಿ ಸರಕಾರಿ ಶಾಲೆಯನ್ನು ಬೆಳೆಸಿ ಎಂಬುದಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು. ಕಾರ್ಯಕ್ರಮದಲ್ಲಿ ಕಟ್ಟಡ ಕಂಟ್ರಾಕ್ಟರ್ ಅಖಿಲ್ ರೈ, ಪ್ರಮುಖರಾದ ಅಭಿಷೇಕ್ ರೈ, ಹರೀಶ್ ಟೈಲರ್, ರಾಜಾರಾಮ ಹೆಗ್ಡೆ, ಶಶಿಕಲಾ, ನತಾಲಿಯ, ಕೃಷ್ಣಪ್ಪ ಪೂಜಾರಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಹರೀಶ್ ಆಚಾರಿ, ಉಪಾಧ್ಯಕ್ಷೆ ಸುಪ್ರೀತ, ಲಕ್ಷ್ಮೀ ನಾರಾಯಣ ಅಡ್ಯಂತಾಯ, ಮುಖ್ಯ ಶಿಕ್ಷಕಿ ಜೆಸಿಂತ ಡಿ ‘ಸಿಲ್ವ,ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಹಳೆವಿದ್ಯಾರ್ಥಿ ಮಿತ್ರರು, ಮಕ್ಕಳ ಪೋಷಕರು, ಶಾಲಾಭಿಮಾನಿಗಳು, ಶಿಕ್ಷಕ ವೃಂದ, ಅಡುಗೆ ಸಿಬ್ಬಂದಿಗಳು, ಅಂಗನವಾಡಿ ಶಿಕ್ಷಕಿಯರು ಮತ್ತು ಮಕ್ಕಳು ಉಪಸ್ಥಿತರಿದ್ದರು.