ನೂತನವಾಗಿ ಕಟ್ಟಲ್ಪಡುತ್ತಿರುವ ಮೂಡುಬಿದಿರೆ ಪತ್ರಿಕಾ ಭವನಕ್ಕೆ ಎಂಸಿಸಿ ಬ್ಯಾಂಕು ನವೆಂಬರ್ ಹತ್ತರಂದು ಸ್ಥಳಾಂತರಗೊಂಡಿತು. ಸ್ಥಳಾಂತರಿಕ ನೂತನ ಶಾಖೆಯಲ್ಲಿ ಮೂಡುಬಿದಿರೆ ವಲಯ ಪ್ರಧಾನ ಗುರು ರೆ.ಫಾ. ಓನಿಲ್ ಡಿಸೋಜ ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೋ ಮಾತನಾಡಿ ಪ್ರಸ್ತುತ ವಹಿವಾಟು 65 ಕೋಟಿಗೆ ತಲುಪಿದೆ. 40 ಕೋಟಿ ಠೇವಣಿ ಇದ್ದು ಮುಂಗಡಸಾಲವೂ ಕೂಡ 25 ಕೋಟಿ ದಾಟಿದೆ. ಬ್ಯಾಂಕಿನ 114 ವರ್ಷಗಳಲ್ಲಿ ನಮಗೆ ಗ್ರಾಹಕರೇ ನಿಜವಾದ ಬ್ರಾಂಡ್ ರಾಯಭಾರಿಗಳು. ಉತ್ತಮ ಸೇವೆ ನೀಡುತ್ತಿದ್ದು ಉತ್ತಮ ಭದ್ರತೆಯನ್ನು ಗ್ರಾಹಕರಿಗೆ ಒದಗಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮೌಂಟ್ ರೋಜರಿ ಚಾರಿಟೇಬಲ್ಗೆ 1 ಲಕ್ಷ ದೇಣಿಗೆ ನೀಡಲಾಯಿತು. ಹೆಸರಾಂತ ಕ್ರೀಡಾಪಟು, ವಕೀಲ, ದಾನಿಗಳನ್ನು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಅಲಂಗಾರು ವಂ. ಮೇಲ್ವಿನ್ ನೊರೊನ್ನ, ಸಂಪಿಗೆ ವಂ. ವಿನ್ಸೆಂಟ್ ಡಿಸೋಜ, ಮಾಜಿ ಸಚಿವ ಅಭಯ ಚಂದ್ರ ಜೈನ್, ವಂ. ಸುನೀತಾ ಡಿಸೋಜ, ವಕೀಲ ಪ್ರವೀಣ್ ಲೋಬೋ, ರೋಹನ್ ರಾಜೇಶ್ ಮೆಂಡಿಸ್, ಅಬ್ದುಲ್ ರಹಿಮಾನ್, ಸೀತಾರಾಮ ಆಚಾರ್ಯ ಹಾಜರಿದ್ದರು.

ಉಪಾಧ್ಯಕ್ಷ ಜೆರಾಲ್ಡ್ ಮಿನೆಜಸ್,ಆಂಡ್ರೂ ಡಿಸೋಜ, ವ್ಯವಸ್ಥಾಪಕ ಸುನಿಲ್ ಐ, ರೋಹನ್ ಡಿ ಸಿಲ್ವಾ, ನಿರ್ದೇಶಕರುಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಓವಿನ್ ರೆಬೆಲ್ಲೋ, ಜೈಸನ್ ಪಿರೇರಾ ಕಾರ್ಯಕ್ರಮ ಸಂಘಟಿಸಿದ್ದರು.
ವರದಿ ರಾಯಿ ರಾಜ ಕುಮಾರ್

