ನ. 15ರಂದು ಸ್ವರ್ಣ ಧಾಮ ಹಿರಿಯ ನಾಗರಿಕರ ವಸತಿ ಬಡಾವಣೆಯ ಮಹಾದ್ವಾರ ಹಾಗೂ ಮಾದರಿ ಮನೆಯ ಶಂಕುಸ್ಥಾಪನೆ

0
6

ಮೂಡುಬಿದಿರೆ: ಗ್ರಹಲಕ್ಷ್ಮೀ ಹೌಸಿಂಗ್ ಸೊಲ್ಯೂಷನ್ಸ್ ಪ್ರೈ.ಲಿ. ಸಂಸ್ಥೆಯ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ‘ಸ್ವರ್ಣ ಧಾಮ’ ಗೃಹ ಹಾಗೂ ನಾಗರಿಕರ ವಸತಿ ಬಡಾವಣೆಯ ಮಹಾದ್ವಾರ ಮತ್ತು ಮಾದರಿ ಮನೆಯ ಶಂಕುಸ್ಥಾಪನಾ ಕಾರ್ಯಕ್ರಮ ನವೆಂಬರ್ 15ರಂದು ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ.

ಬೆಳುವಾಯಿ ಗ್ರಾಮದ ಆಯರಬೆಟ್ಟು, ಬೈಲಬರಿ ರಸ್ತೆ, ಕೆಸರಗದ್ದೆ , ಮೂಡುಬಿದಿರೆ ತಾಲೂಕಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮದ ಶಂಕುಸ್ಥಾಪನೆಯನ್ನು ಪರಮಪೂಜ್ಯ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ನೆರವೇರಿಸಲಿದ್ದಾರೆ. ಕಾಂಕ್ರೀಟ್ ರಸ್ತೆಯ ಲೋಕಾರ್ಪಣೆಯನ್ನು ಮುಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಜಗದೀಶ್ ಕೆ. ಶೆಣವ ಹಾಗೂ ಸಹಕಾರಿ ರತ್ನ ಭಾಸ್ಕರ ಎಸ್. ಕೊಟ್ಟ್ಯಾನ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಹಲಕ್ಷ್ಮೀ ಹೌಸಿಂಗ್ ಸೊಲ್ಯೂಷನ್ಸ್ ಪ್ರೈ.ಲಿ.ಯ ಗೌರವ ಸಲಹೆಗಾರ ನೆರೋಳು ಈಶ್ವರ ಭಟ್ ವಹಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು, ಗಣ್ಯರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಆಹ್ವಾನಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ: 9110689121