ಮುಲ್ಕಿ: ಬಪ್ಪನಾಡು ದೀಪೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

0
4


ಮುಲ್ಕಿ: ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಡಿಸೆಂಬರ್ 8 ಮಂಗಳವಾರ ಲೋಕಕಲ್ಯಾಣಕ್ಕಾಗಿ ನಡೆಯಲಿರುವ ದೀಪೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಬಪ್ಪನಾಡು ಕ್ಷೇತ್ರದಲ್ಲಿ ನಡೆಯಿತು.
ಕ್ಷೇತ್ರದ ಅರ್ಚಕರಾದ ಶ್ರೀಪತಿ ಉಪಾಧ್ಯಾಯ ವಿಶೇಷ ಪ್ರಾರ್ಥನೆ ಸಲ್ಲಿಸಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.
ಈ ಸಂದರ್ಭ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು, ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಸುನಿಲ್ ಆಳ್ವ ಡಾ.ಹರೀಶ್ಚಂದ್ರ ಪಿ ಸಾಲ್ಯಾನ್ ,ಮಹೀಮ್ ಹೆಗ್ಡೆ, ಸತೀಶ್ ಶೆಟ್ಟಿ ಕಡವಿನ ಬಾಗಿಲು,ಕೃಷ್ಣರಾಜ ಬಪ್ಪನಾಡು, ನಾಗರಾಜ್ ಪೂಜಾರಿ, ಚಿರಾಗ್, ಭಾನುಮತಿ ಶೆಟ್ಟಿ ಕಕ್ವಗುತ್ತು, ಸರೋಜಿನಿ ಸುವರ್ಣ,ದಿನೇಶ್ ಕೊಲ್ನಾಡು, ವಾಸು ಪೂಜಾರಿ ಚಿತ್ರಾಪು, ಗಿರೀಶ್ ಮೆಂಡನ್, ಸತೀಶ್ ಬಂಗೇರ, ವಾಸು ಪೂಜಾರಿ ಕೊಲಕಾಡಿ, ಸುರೇಂದ್ರ ಶೆಣೈ, ರವಿ ಅಂಚನ್, ರಾಜೇಶ್ ಅಮೀನ್ ಕಿಲ್ಪಾಡಿ, ಮತ್ತಿತರರು ಉಪಸ್ಥಿತರಿದ್ದರು.