ಮಣಿಪಾಲ ; ದಶರಥ ನಗರದ ನಿವಾಸಿ ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷರಾದ ಇಮ್ಮಾನುಯೆಲ್ ರೇಮಂಡ್ ಫೆರ್ನಾಂಡಿಜ್ 74 ರಂದು ತಮ್ಮ್ ಸ್ವಗ್ರಹದಲ್ಲಿ ನ .10 ರಂದು ನಿಧನರಾದರು ಪತ್ನಿ ಎರಡು ಹೆಣ್ಣು ಮಕ್ಕಳನ್ನು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ
ಕರ್ನಾಟಕ ಕೈಗಾರಿಕಾ ಸಂಘ ಹಾಗೂ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದಲ್ಲಿ 28 ವರ್ಷಗಳ ಕಾಲ ಸದಸ್ಯರಾಗಿ ಸೇವೆ ನೀಡಿದ್ದಾರೆ , ಮಣಿಪಾಲ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕರ್ನಾಟಕ ಸಿಲೋಸುರ್ಸ್ ಪ್ರವೇಟ್ ಲಿಮಿಟೆಡ್ ಸಂಸ್ಥೆ ಸ್ಥಾಪಿಸಿ , ರೋಟರಿ ಕ್ಲಬ್ ಸದಸ್ಯರಾಗಿ ಸಾಮಾಜಿಕ , ಧಾರ್ಮಿಕ , ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ನೀಡಿ ಐ. ಆರ್, ಫೆರ್ನಾಂಡಿಸ್ ಹೆಸರಿನೊಂದಿಗೆ ಜನಪ್ರಿಯತೆ ಹೊಂದಿದ್ದರು , ಇವರ ನಿಧನ ಕೆ ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷರು , ಪಧಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ .

